ವಿಪ್ರೋ ತ್ರೈಮಾಸಿಕ ಫಲಿತಾಂಶ ಕುಸಿತ: ಸೂಚ್ಯಂಕ ಪಾತಾಳಕ್ಕೆ

ಶುಕ್ರವಾರ, 25 ಜುಲೈ 2014 (13:09 IST)
ಐಟಿ ಕಂಪೆನಿಗಳ ತ್ರೈಮಾಸಿಕ ಫಲಿತಾಂಶ ಕುಸಿತದಿಂದಾಗಿ ಹೂಡಿಕೆದಾರರು ಶೇರುಗಳ ಖರೀದಿಗೆ ನಿರಾಸಕ್ತಿ ತೋರಿದ್ದರಿಂದ ಸೂಚ್ಯಂಕ ಶೇ.0.36 ರಷ್ಟು ಕುಸಿತ ಕಂಡಿದೆ.
 
ರಾಷ್ಟೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.0.44 ರಷ್ಟು ಇಳಿಕೆ ಕಂಡಿದೆ.
 
ವಿಪ್ರೋ ಕಂಪೆನಿಯ ತ್ರೈಮಾಸಿಕ ಫಲಿತಾಂಶ ಕುಸಿತ ಕಂಡ ಹಿನ್ನೆಲೆಯಲ್ಲಿ ವಿಪ್ರೋ ಶೇರುಗಳ ವಹಿವಾಟಿನಲ್ಲಿ ಶೇ.12 ರಷ್ಟು ಕುಸಿತವಾಗಿದೆ. ತಂತ್ರಜ್ಞಾನ ಕ್ಷೇತ್ರದ ಕಂಪನಿಗಳ ಶೇರುವಹಿವಾಟಿನಲ್ಲಿ ಕುಸಿತ ಕಂಡಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
 
ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್ ಶೇ.0.7 ರಷ್ಟು ಮತ್ತು ಇನ್ಫೋಸಿಸ್ ಶೇ.0.78ರಷ್ಟು ಕುಸಿತ ಕಂಡಿದೆ. ಹಿಂಡಾಲ್ಕೋ ಕಂಪೆನಿಗಳ ಶೇರುಗಳು ವಹಿವಾಟಿನಲ್ಲಿ ಇಳಿಕೆಯಾಗಿವೆ.
 
 
 
 
 
 
 

ವೆಬ್ದುನಿಯಾವನ್ನು ಓದಿ