ಸತತ ಎರಡನೇ ದಿನವೂ ಕುಸಿತ ಕಂಡ ಶೇರುಪೇಟೆ ಸಂವೇದಿ ಸೂಚ್ಯಂಕ

ಮಂಗಳವಾರ, 24 ನವೆಂಬರ್ 2015 (18:21 IST)
ಯುರೋಪ್ ಮತ್ತು ಏಷ್ಯಾ ಮಾರುಕಟ್ಟೆಗಳ ಮಿಶ್ರ ವಹಿವಾಟಿನಿಂದಾಗಿ ದೇಶಿಯ ಶೇರುಪೇಟೆ ವಹಿವಾಟಿನ ಮುಕ್ತಾಯಕ್ಕೆ ಸತತ ಎರಡನೇ ದಿನವೂ 44 ಪಾಯಿಂಟ್‌ಗಳ ಅಲ್ಪ ಕುಸಿತ ಕಂಡಿದೆ.
 
ನಾಳೆ ಗುರುನಾನಕ ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ಶೇರುಪೇಟೆಗೆ ರಜೆ ಘೋಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಕಳೆದ ಎರಡು ದಿನಗಳ ವಹಿವಾಟಿನಲ್ಲಿ 92.75 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ ಮತ್ತೆ 43.60 ಪಾಯಿಂಟ್‌ಗಳ ಕುಸಿತ ಕಂಡು 25,775.74 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ17.65 ಪಾಯಿಂಟ್‌ಗಳ ಕುಸಿತ ಕಂಡು 7,831.60 ಅಂಕಗಳಿಗೆ ತಲುಪಿದೆ.  
 
ಮಾರುತಿ ಸುಜುಕಿ, ಬಜಾಜ್ ಅಟೋ, ಸನ್‌ಫಾರ್ಮಾ, ಎನ್‌ಟಿಪಿಸಿ ಮತ್ತು ವಿಪ್ರೋ ಸೇರಿದಂತೆ 22 ಕ್ಷೇತ್ರಗಳ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.
 
ಹಿಂದುಸ್ತಾನ್ ಯುನಿಲಿವರ್, ಎಚ್‌ಡಿಎಫ್‌ಸಿ ಲಿಮಿಟೆಡ್, ಆರ್‌ಐಎಲ್, ಲುಪಿನ್ ಮತ್ತು ಬಾರ್ತಿ ಏರ್‌ಟೆಲ್ ಶೇರುಗಳು ಶೇ.2.42 ರಷ್ಟು ಚೇತರಿಕೆ ಕಂಡಿವೆ.
 

ವೆಬ್ದುನಿಯಾವನ್ನು ಓದಿ