ಸೆನ್ಸೆಕ್ಸ್: ಲಾಭದಾಯಕ ವಹಿವಾಟಿನಿಂದ ಸಂವೇದಿ ಸೂಚ್ಯಂಕ ಕುಸಿತ

ಗುರುವಾರ, 24 ಜುಲೈ 2014 (13:27 IST)
ಹೂಡಿಕೆದಾರರು ಲಾಭದಾಯಕ ವಹಿವಾಟಿಗೆ ಮೊರೆಹೋಗಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 25 ಪಾಯಿಂಟ್‌ಗಳ ಅಲ್ಪ ಕುಸಿತ ಕಂಡಿದೆ.
 
ಬಂಡವಾಳ ವಸ್ತುಗಳು, ತೈಲ ಮತ್ತು ಅನಿಲ ಹಾಗೂ ವಿದ್ಯುತ್ ಕ್ಷೇತ್ರದ ಶೇರುಗಳ ಖರೀದಿಗೆ ಮಾತ್ರ ಆಸಕ್ತಿ ತೋರಿದ್ದರಿಂದ ವಹಿವಾಟು ಕುಸಿತವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಕಳೆದ ವಾರದ ಅವಧಿಯ ವಹಿವಾಟಿನಲ್ಲಿ 1140.35 ಪಾಯಿಂಟ್‌ಗಳ ಚೇತರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 25.91 ಪಾಯಿಂಟ್‌ಗಳ ಇಳಿಕೆಯಾಗಿ 26,121.42 ಅಂಕಗಳಿಗೆ ತಲುಪಿದೆ.
 
ರಾಷ್ಟೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 12.05 ಪಾಯಿಂಟ್‌ಗಳ ಕುಸಿತ ಕಂಡು 7783.10 ಅಂಕಗಳಿಗೆ ತಲುಪಿದೆ.
 
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.0.45 ರಷ್ಟು ಏರಿಕೆಯಾಗಿದೆ. ಜಪಾನ್‌ನ ನಿಕೈ ಸೂಚ್ಯಂಕ ಕೂಡಾ ಶೇ.0.11 ರಷ್ಟು ಚೇತರಿಕೆಯಾಗಿದೆ.
 
 
 
 
 

ವೆಬ್ದುನಿಯಾವನ್ನು ಓದಿ