ಬಂಡವಾಳದ ಹೊರಹರಿವು ಹೆಚ್ಚಳ: ಕುಸಿದ ಶೇರು ಸೂಚ್ಯಂಕ

ಶುಕ್ರವಾರ, 24 ಏಪ್ರಿಲ್ 2015 (13:09 IST)
ಕುಸಿದ ಕಾರ್ಪೋರೇಟ್ ಕಂಪೆನಿಗಳ ತ್ರೈಮಾಸಿಕ ಲಾಭ ಮತ್ತು ವಿದೇಶ ಬಂಡವಾಳದ ಹೊರಹರಿವು ಹೆಚ್ಚಳದಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 139 ಪಾಯಿಂಟ್‌ಗಳ ಕುಸಿತ ಕಂಡಿದೆ.

ಗೃಹೋಪಕರಣ ವಸ್ತುಗಳು, ರಿಯಲ್ಟಿ, ಬಂಡವಾಳ ವಸ್ತುಗಳು, ಬ್ಯಾಂಕಿಂಗ್ ಮತ್ತು ವಿದ್ಯುತ್ ಕ್ಷೇತ್ರದ ಶೇರುಗಳ ಮಾರಾಟದಿಂದಾಗಿ ಬಿಎಸ್‌ಇ ಸೂಚ್ಯಂಕ ಶೇ.139.29 ಪಾಯಿಂಟ್‌ಗಳ ಇಳಿಕೆ ಕಂಡು 27,595.73 ಅಂಕಗಳಿಗೆ ತಲುಪಿದೆ.

ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 50.35 ಪಾಯಿಂಟ್‌ಗಳ ಕುಸಿತ ಕಂಡು 8347.95 ಅಂಕಗಳಿಗೆ ತಲುಪಿದೆ.

ಕುಸಿದ ಕಾರ್ಪೋರೇಟ್ ಕಂಪೆನಿಗಳ ತ್ರೈಮಾಸಿಕ ಲಾಭ ಮತ್ತು ವಿದೇಶ ಬಂಡವಾಳದ ಹೊರಹರಿವು ಹೆಚ್ಚಳದಿಂದಾಗಿ ಶೇರುಪೇಟೆಯ ಸೂಚ್ಯಂಕ ಕುಸಿತ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ,0.33 ರಷ್ಟು ಕುಸಿತ ಕಂಡಿದೆ. ಜಪಾನ್‌ನ ನಿಕೈ ಮಾರುಕಟ್ಟೆ ಸೂಚ್ಯಂಕ ಕೂಡಾ ಶೇ.0.80 ಅಂಕಗಳಿಗೆ ತಲುಪಿದೆ.

ವೆಬ್ದುನಿಯಾವನ್ನು ಓದಿ