ಸೆನ್ಸೆಕ್ಸ್‌ : 23,332.90 ಅಂಕಗಳಿಗೆ ತಲುಪಿದ ಸೂಚ್ಯಂಕ

ಸೋಮವಾರ, 12 ಮೇ 2014 (13:10 IST)
ಏಷ್ಯಾ ಮಾರುಕಟ್ಟೆಯಲ್ಲಿ ಚೇರರಿಕೆ ಕಂಡು ಬಂದ ಕಾರಣ ಮತ್ತು ಚುನಾವಣೆಯ ಕಾರಣ ಶೇರುಗಳು ಬೇಡಿಕೆ ಹೆಚ್ಚಳವಾದ ಕಾರಣ ಮುಂಬೈ ಶೇರು ಮಾರುಕಟ್ಟೆಯಲ್ಲಿ ಸೂಚ್ಯಂಕ ಪ್ರಾರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ 23,332.90 ಅಂಕಗಳಿಗೆ ತಲುಪಿದೆ. ಕಳೆದ ದಿನದ ವಹಿವಾಟುವಿನಲ್ಲಿ ಮುಂಬೈ ಶೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕ ಬಿಎಸ್‌‌‌‌ಸಿ-30 650.19 ಅಂಕಗಳಿಗೆ ತಲುಪಿತ್ತು , ಆದರೆ ಇಂದಿನ ಪ್ರಾರಂಬಿಕ ವಹಿವಾಟುವಿನಲ್ಲಿ 338.67 ಅಂಕ ಅಥವಾ ಶೇ.1.47 ರಷ್ಟು ಚೇತರಿಕೆ ಕಾಣುವ ಮೂಲಕ 23,332.90 ಅಂಕಗಳಿಗೆ ತಲುಪಿದೆ. 
 
ನ್ಯಾಶನಲ್‌ ಸ್ಟಾಕ್‌‌ ಎಕ್ಸೆಂಜ್‌‌ ನಿಪ್ಟಿ-50 93.60 ಅಂಕ ಅಥವಾ ಶೇ.1.36 ರಷ್ಟು ಚೇತರಿಕೆ ಕಾಣುವ ಮೂಲಕ 6,952.40 ಅಂಕಗಳಿಗೆ ತಲುಪಿದೆ. ಚುನಾವಣೆಯ ಕಾರಣ ಶೇರುಗಳ ಖರೀದಿ ಹೆಚ್ಚಳವಾದ ಕಾರಣ ಸೆನ್ಸೆಕ್ಸ್‌‌ನಲ್ಲಿ ಏರಿಕೆ ಕಂಡು ಬರುತ್ತಿದೆ ಎಂದು ಶೇರು ವಿಶ್ಲೇಷಕರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ