ಸೆನ್ಸೆಕ್ಸ್ ದಾಖಲೆಯ ವಹಿವಾಟು 27 ಸಾವಿರ ಗಡಿದಾಟಿದ ಸೂಚ್ಯಂಕ

ಶುಕ್ರವಾರ, 31 ಅಕ್ಟೋಬರ್ 2014 (13:25 IST)
ಕಾರ್ಪೋರೇಟ್ ಕಂಪೆನಿಗಳ ತ್ರೈಮಾಸಿಕ ಫಲಿತಾಂಶ ಚೇತರಿಕೆ ಮತ್ತು ಕೇಂದ್ರ ಸರಕಾರ ಆರ್ಥಿಕ ನೀತಿ ಸುಧಾರಣೆ ಘೋಷಣೆಯಿಂದಾಗಿ ಪ್ರೇರಣಗೊಂಡ ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆ ಭರ್ಜರಿ ಚೇತರಿಕೆ ಕಂಡು 27493 ಅಂಕಗಳ ಗಡಿ ದಾಟಿದೆ.
 
ಕಳೆದ ಮೂರು ದಿನಗಳ ವಹಿವಾಟಿನಲ್ಲಿ 593.43 ಪಾಯಿಂಟ್‌ಗಳ ಚೇತರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 147.26 ಪಾಯಿಂಟ್‌ಗಳ ಏರಿಕೆ ಕಂಡು 27,493.59 ಅಂಕಗಳಿಗೆ ತಲುಪಿದೆ. 
 
ಐಟಿ, ಬಂಡವಾಳ ವಸ್ತುಪಗಳು ಮತ್ತು ಹೆಲ್ತ್‌ಕೇರ್ ಕ್ಷೇತ್ರ ಸೇರಿದಂತೆ ಇತರ ಕಂಪೆನಿಗಳ ಸೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 45.45 ಪಾಯಿಂಟ್‌ಗಳ ಏರಿಕೆ ಕಂಡು 8181.55 ಅಂಕಗಳಿಗೆ ತಲುಪಿದೆ.
 
ಸಾಗರೋತ್ತರ ಮಾರುಕಟ್ಟೆಗಳ ಚೇತರಿಕೆಯ ವಹಿವಾಟು ಕೂಡಾ ದೇಶಿಯ ಶೇರುಪೇಟೆಯ ಮೇಲೆ ಪ್ರಭಾವ ಬೀರಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ