ಸೆನ್ಸೆಕ್ಸ್: 350 ಪಾಯಿಂಟ್‌ಗಳ ಭರ್ಜರಿ ಚೇತರಿಕೆ ಕಂಡ ಸಂವೇದಿ ಸೂಚ್ಯಂಕ

ಗುರುವಾರ, 19 ಮಾರ್ಚ್ 2015 (16:10 IST)
ಜಾಗತಿಕ ಮಾರುಕಟ್ಟೆಗಳ ಚೇತರಿಕೆಯ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಭರ್ಜರಿ 350 ಪಾಯಿಂಟ್‌ಗಳ ಏರಿಕೆ ಕಂಡಿದೆ.

ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಚೇತರಿಕೆ ಕಂಡಿರುವುದೂ ಶೇರುಪೇಟೆ ಚೇತರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 114.26 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 349.79 ಪಾಯಿಂಟ್‌ಗಳ ಏರಿಕೆ ಕಂಡು 28,971.91 ಅಂಕಗಳಿಗೆ ತಲುಪಿದೆ.

ಹೆಲ್ತ್‌ಕೇರ್, ಬಂಡವಾಳ ವಸ್ತುಗಳು, ಉಕ್ಕು ಮತ್ತು ಗೃಹೋಪಕರಣ ವಸ್ತುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದಾರೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 99.95 ಪಾಯಿಂಟ್‌ಗಳ ಇಳಿಕೆ ಕಂಡು 8785.85 ಅಂಕಗಳಿಗೆ ತಲುಪಿದೆ.

ಗೇಲ್, ಎಕ್ಸಿಸ್ ಬ್ಯಾಂಕ್, ವಿಪ್ರೋ, ಹಿಂಡಾಲ್ಕೋ, ಟಿಸಿಎಸ್, ಟಾಟಾ ಸ್ಟೀಲ್, ಸೆಸಾ ಸ್ಟೆರ್ಲೈಟ್, ಎಲ್‌ಆಂಡ್‌ಟಿ , ಸಿಪ್ಲಾ, ಹಿಂದುಸ್ತಾನ್ ಯುನಿಲಿವರ್, ಕೋಲ್ ಇಂಡಿಯಾ, ಡಾ.ರೆಡ್ಡಿ ಮತ್ತು ಟಾಟಾ ಪವರ್ ಶೇರುಗಳು ವಹಿವಾಟಿನಲ್ಲಿ ಬಾರಿ ಚೇತರಿಕೆ ಕಂಡಿವೆ.

ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.1.47 ರಷ್ಟು ಏರಿಕೆ ಕಂಡಿದೆ. ಆದರೆ, ಜಪಾನ್‌ನ ನಿಕೈ ಮಾರುಕಟ್ಟೆ ಸೂಚ್ಯಂಕ ಶೇ.0.65 ರಷ್ಟು ಕುಸಿತ ಕಂಡಿದೆ.

ವೆಬ್ದುನಿಯಾವನ್ನು ಓದಿ