ಸೆನ್ಸೆಕ್ಸ್: 565 ಪಾಯಿಂಟ್‌ಗಳ ಚೇತರಿಕೆ ಕಂಡ ಶೇರುಸೂಚ್ಯಂಕ

ಸೋಮವಾರ, 5 ಅಕ್ಟೋಬರ್ 2015 (20:42 IST)
ಅಮೆರಿಕ ರಿಸರ್ವ್ ಬ್ಯಾಂಕ್ ರೆಪೋ ದರಗಳಲ್ಲಿ ಕಡಿತಗೊಳಿಸಲು ವಿಳಂಬ ನೀತಿ ಅನುಸರಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ 564.60 ಅಂಶಗಳಿಗೆ ತಲುಪಿದೆ.
 
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 31 ಪೈಸೆ ಚೇತರಿಕೆ ಕಂಡಿರುವುದು ಕೂಡಾ ಶೇರುಪೇಟೆಯ ಭರ್ಜರಿ ವಹಿವಾಟಿಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 564.60 ಪಾಯಿಂಟ್‌ಗಳ ಏರಿಕೆ ಕಂಡು 26,822.42 ಅಂಕಗಳಿಗೆ ತಲುಪಿದೆ.  
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 168.40 ಪಾಯಿಂಟ್‌ಗಳಿಗೆ ಏರಿಕೆಯಾಗಿ 8,128.90 ಅಂಕಗಳಿಗೆ ತಲುಪಿದೆ.
 
ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಹಿಂಡಾಲ್ಕೋ, ಎಚ್‌ಡಿಎಫ್‌ಸಿ, ಎಲ್‌ಆಂಡ್‌ಟಿ ಮತ್ತು ಹೀರೋ ಮೋಟಾರ್ ಕಾರ್ಪೋರೇಶನ್ ಶೇರುಗಳು ವಹಿವಾಟಿನಲ್ಲಿ ಹೆಚ್ಚಿನ ಲಾಭಗಳಿಸಿವೆ. 
 
ಆದರೆ, ಮಾರುತಿ ಸುಜುಕಿ, ಡಾ.ರೆಡ್ಡಿ ಲ್ಯಾಬ್ , ಲುಪಿನ್ ಮತ್ತು ಎಚ್‌ಯುಎಲ್ ಶೇರುಗಳು ವಹಿವಾಟಿನಲ್ಲಿ ನಷ್ಟ ಅನುಭವಿಸಿವೆ.

ವೆಬ್ದುನಿಯಾವನ್ನು ಓದಿ