118 ಪಾಯಿಂಟ್ ಏರಿಕೆಯಾದ ಸಂವೇದಿ ಸೂಚ್ಯಂಕ

ಗುರುವಾರ, 24 ಏಪ್ರಿಲ್ 2014 (15:43 IST)
ಬಿಎಸ್‌ಸಿ ಸಂವೇದಿ ಸೂಚ್ಯಂಕ ಬುಧವಾರ 118 ಪಾಯಿಂಟ್ ಏರಿಕೆಯಾಗಿ ದಾಖಲೆಯ ಅತ್ಯಧಿಕ 22, 876.54ರಲ್ಲಿ ಮುಕ್ತಾಯಗೊಂಡಿದೆ. ಬಂಡವಾಳ ಸರಕುಗಳು ಮತ್ತು ಬ್ಯಾಂಕಿಂಗ್ ಷೇರುಗಳ ಖರೀದಿಯಿಂದ ಈ ಬೆಳವಣಿಗೆ ಉಂಟಾಗಿದೆ. ಇದೇ ರೀತಿ ನಿಫ್ಟಿ ಮತ್ತು ರಾಷ್ಟ್ರೀಯ ಷೇರುಪೇಟೆಯಲ್ಲಿ ಕೂಡ ಸೂಚ್ಯಂತ 25.47 ಪಾಯಿಂಟ್ ಏರಿಕೆಯಾಗಿದೆ.
 
ಸಂವೇದಿ ಸೂಚ್ಯಂಕ ಮೊದಲಿಗೆ ಲಾರ್ಸನ್ ಅಂಡ್ ಟುಬ್ರೋ, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕುಗಳ ಷೇರುಗಳ ಮೌಲ್ಯ ಹೆಚ್ಚಳದಿಂದ 22,912.52 ಅಂಶಗಳನ್ನು ಮುಟ್ಟಿತು. ನಂತರ ಸ್ವಲ್ಪ ನಷ್ಟ ಅನುಭವಿಸಿ 22, 876.54ರಲ್ಲಿ ಮುಕ್ತಾಯಗೊಂಡು 118.17 ಪಾಯಿಂಟಿ ಏರಿಕೆಯಾಗಿದೆ.
 

ವೆಬ್ದುನಿಯಾವನ್ನು ಓದಿ