ಸೆನ್ಸೆಕ್ಸ್: 8 ಸಾವಿರ ಅಂಕಗಳ ಗಡಿ ದಾಟಿದ ನಿಫ್ಟಿ ಸೂಚ್ಯಂಕ

ಸೋಮವಾರ, 1 ಸೆಪ್ಟಂಬರ್ 2014 (13:19 IST)
ದೇಶದ ಆರ್ಥಿಕತೆ ವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೆಗೆದುಕೊಂಡು ಕಠಿಣ ಕ್ರಮಗಳಿಂದಾಗಿ ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಸೂಚ್ಯಂಕ 77.96 ಪಾಯಿಂಟ್‌ಗಳ ಚೇತರಿಕೆ ಕಂಡಿದೆ.  
 
ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 77.96 ಪಾಯಿಂಟ್‌ಗಳ ಏರಿಕೆ ಕಂಡು 26,674.38 ಅಂಕಗಳಿಗೆ ತಲುಪಿದೆ.
 
ಬಿಎಚ್‌ಇಎಲ್, ಎಲ್‌ಆಂಡ್‌ಟಿ, ಐಸಿಐಸಿಐ ಬ್ಯಾಂಕ್, ಒಎನ್‌ಜಿಸಿ, ವಿಪ್ರೋ ಮತ್ತು ಗೇಲ್ ಕಂಪೆನಿಗಳ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.  
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಮೊದಲ ಬಾರಿಗೆ 8 ಸಾವಿರ ಅಂಕಗಳ ಗಡಿಯನ್ನು ದಾಟಿದೆ.
 

ವೆಬ್ದುನಿಯಾವನ್ನು ಓದಿ