ಬರಾಕ್ ಒಬಾಮಾ ಪ್ರಭಾವ: ದಾಖಲೆಯ ಚೇತರಿಕೆ ಕಂಡ ಸಂವೇದಿ ಸೂಚ್ಯಂಕ

ಮಂಗಳವಾರ, 27 ಜನವರಿ 2015 (12:57 IST)
ಶೇರುಪೇಟೆಯ ಸೂಚ್ಯಂಕದ ಚೇತರಿಕೆಯ ವಹಿವಾಟು ಇಂದೂ ಮುಂದುವರೆದಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ ಸೂಚ್ಯಂಕ 29,456.63 ಅಂಶಗಳಿಗೆ ತಲುಪಿದ್ದರೆ ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ 8878.20 ಅಂಕಗಳಿಗೆ ತಲುಪಿದೆ.
 
ಮುಂದಿನ ದಿನಗಳಲ್ಲಿ ಮಂಡನೆಯಾಗಲಿರುವ ಬಜೆಟ್ ಮತ್ತು ಕಂಪೆನಿಗಳ ತ್ರೈಮಾಸಿಕ ಫಲಿತಾಂಶ ಹಾಗೂ ಜಾಗತಿಕ ಮಾರುಕಟ್ಟೆಗಳ ಮಿಶ್ರ ವಹಿವಾಟು ದೇಶಿಯ ಶೇರುಪೇಟೆಯ ಮೇಲೆ ಪ್ರಭಾವ ಬೀರಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಕಳೆದ ಶುಕ್ರವಾರದಂದು 29,408.73 ಅಂಕಗಳ ಏರಿಕೆ ಕಂಡು ದಾಖಲೆ ಸ್ಥಾಪಿಸಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 177.79 ಪಾಯಿಂಟ್‌ಗಳ ಏರಿಕೆ ಕಂಡು 29,456.63 ಅಂಕಗಳಿಗೆ ತಲುಪಿ ಶುಕ್ರವಾರದ ದಾಖಲೆಯನ್ನು ಮುರಿದಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 42.60 ಪಾಯಿಂಟ್‌ಗಳ ಏರಿಕೆ ಕಂಡು 8878.20 ಅಂಶಗಳಿಗೆ ತಲುಪಿದೆ.
 
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಸೋಮವಾರದಂದು ಶೇರುಪೇಟೆಗೆ ರಜೆ ಘೋಷಿಸಲಾಗಿತ್ತು.
 
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.0.83 ರಷ್ಟು ಕುಸಿತ ಕಂಡಿದೆ. ಜಪಾನ್‌ನ ನಿಕೈ ಸೂಚ್ಯಂಕ ಶೇ.1.04 ರಷ್ಟು ಚೇತರಿಕೆ ಕಂಡಿದೆ.
 
 

ವೆಬ್ದುನಿಯಾವನ್ನು ಓದಿ