ಸೆನ್ಸೆಕ್ಸ್: 26 ಸಾವಿರ ಗಡಿ ದಾಟಿದ ಸಂವೇದಿ ಸೂಚ್ಯಂಕ

ಮಂಗಳವಾರ, 2 ಸೆಪ್ಟಂಬರ್ 2014 (12:49 IST)
ಶೇರುಪೇಟೆಯ ಸೂಚ್ಯಂಕ ಸತತ ಮೂರನೇ ದಿನವು ಚೇತರಿಕೆ ಕಂಡಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಬಿಎಸ್‍ಇ ಸೂಚ್ಯಂಕ 81.53 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ಕಳೆದ ಏಳು ದಿನಗಳ ವಹಿವಾಟಿನಲ್ಲಿ 553.44 ಪಾಯಿಂಟ್‌ಗಳ ಏರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 81.53 ಪಾಯಿಂಟ್‌ಗಳ ಏರಿಕೆ ಕಂಡು 26,949.08 ಅಂಕಗಳಿಗೆ ತಲುಪಿದೆ
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 20.95 ಪಾಯಿಂಟ್‌ಗಳ ಏರಿಕೆ ಕಂಡು 8048.65 ಅಂಕಗಳಿಗೆ ತಲುಪಿದೆ. 
 
ಜಪಾನ್ ಪ್ರಧಾನಮಂತ್ರಿ ಭಾರತಕ್ಕೆ 35 ಶತಕೋಟಿ ಡಾಲರ್ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದರಿಂದ ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ