ಸೆನ್ಸೆಕ್ಸ್: ಮುಂದುವರಿದ ಚೇತರಿಕೆಯ ನಾಗಾಲೋಟ

ಶುಕ್ರವಾರ, 23 ಜನವರಿ 2015 (12:21 IST)
ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 235.10 ಪಾಯಿಂಟ್‌ಗಳ ಏರಿಕೆ ಕಂಡು ಭಾರಿ ಚೇತರಿಕೆ ಕಂಡಿದೆ. 
 
ಮುಂದಿನ ತಿಂಗಳಲ್ಲಿ ಕೇಂದ್ರ ಬಜೆಟ್ ಮಂಡನೆ ಹಾಗೂ ಕಾರ್ಪೋರೇಟ್ ಕಂಪೆನಿಗಳ ತ್ರೈಮಾಸಿಕ ಫಲಿತಾಂಶಗಳ ಚೇತರಿಕೆಯ ವಹಿವಾಟಿನಿಂದಾಗಿ ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದಾರೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಉಕ್ಕು, ಗೃಹೋಪಕರಣ ವಸ್ತುಗಳು, ರಿಯಲ್ಟಿ, ವಿದ್ಯುತ್ ಮತ್ತು ಐಟಿ ಕ್ಷೇತ್ರದ ಶೇರುಗಳು ಖರೀದಿಯಲ್ಲಿ ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 57.85 ಪಾಯಿಂಟ್‌ಗಳ ಏರಿಕೆಯಾಗಿ 8819.25 ಅಂಶಗಳಿಗೆ ತಲುಪಿದೆ. 

ವೆಬ್ದುನಿಯಾವನ್ನು ಓದಿ