ಸೆನ್ಸೆಕ್ಸ್: 34 ಪಾಯಿಂಟ್‌ಗಳ ಏರಿಕೆ ಕಂಡ ಶೇರುಪೇಟೆ ಸೂಚ್ಯಂಕ

ಶುಕ್ರವಾರ, 12 ಫೆಬ್ರವರಿ 2016 (20:13 IST)
ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 34 ಪಾಯಿಂಟ್‌ಗಳ ಏರಿಕೆಯೊಂದಿಗೆ ಅಂತ್ಯವಾಗಿದೆ.
 
ಬ್ಯಾಂಕ್ ಆಧರಿತ ಶೇರುಗಳು, ಬ್ಲ್ಯೂ-ಚಿಪ್ ಶೇರುಗಳ ಮಾರಾಟ ಮತ್ತು ಜಾಗತಿಕ ಆರ್ಥಿಕ ಕುಸಿತ ಆರು ವರ್ಷಗಳ ಗರಿಷ್ಠ ಕುಸಿತ ಕಂಡಿದೆ.ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 34.29 ಪಾಯಿಂಟ್‌ಗಳಿಗೆ 22,986.12 ಅಂಕಗಳಿಗೆ ತಲುಪಿದೆ.
  
ಎನ್‌ಎಸ್‌ಇ ನಿಫ್ಟಿ ಸೂಚ್ಯಂಕ 4.60 ಪಾಯಿಂಟ್‌ಗಳ ಏರಿಕೆ ಕಂಡು 6,980.95 ಅಂಕಗಳಿಗೆ ತಲುಪಿದೆ.ಟಾಟಾ ಮೋಟಾರ್ಸ್, ಭಾರ್ತಿ ಏರ್‌ಟೆಲ್ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಜಪಾನ್‌ನ ನಿಕೈ ಶೇರುಪೇಟೆ ಶೇ.4.84 ರಷ್ಟು ಕುಸಿತ ಕಂಡಿದೆ. ಹಾಂಗ್‌ಕಾಂಗ್‌ ಮತ್ತು ದಕ್ಷಿಣ ಕೊರಿಯಾ ಶೇ.1.22 ರಷ್ಟು ಮತ್ತು ಶೇ.1.41 ರಷ್ಟು ಇಳಿಕೆ ಕಂಡಿದೆ.  
 

ವೆಬ್ದುನಿಯಾವನ್ನು ಓದಿ