ಸೆನ್ಸೆಕ್ಸ್: 132 ಪಾಯಿಂಟ್‌ಗಳ ಚೇತರಿಕೆ ಕಂಡ ಶೇರುಪೇಟೆ ಸೂಚ್ಯಂಕ

ಬುಧವಾರ, 29 ಜುಲೈ 2015 (14:50 IST)
ಸತತ ನಾಲ್ಕು ದಿನಗಳಿಂದ ಕುಸಿತ ಕಂಡಿರುವ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 132 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ಉಕ್ಕು, ವಾಹನೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ಶೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದರಿಂದ ಶೇರುಪೇಟೆ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
 
ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 132.42 ಪಾಯಿಂಟ್‌ಗಳ ಏರಿಕೆ ಕಂಡು 27,591.65 ಅಂಕಗಳಿಗೆ ತಲುಪಿದೆ.
 
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 37.90 ಪಾಯಿಂಟ್‌ಗಳ ಏರಿಕೆ ಕಂಡು 8,374.90 ಅಂಕಗಳಿಗೆ ತಲುಪಿದೆ.
 
ಅಮೆರಿಕ ಮತ್ತು ಏಷ್ಯಾ ಶೇರುಪೇಟೆಗಳ ಚೇತರಿಕೆಯ ವಹಿವಾಟಿನ ಪ್ರಭಾವ ದೇಶಿಯ ಶೇರುಪೇಟೆಯಲ್ಲಿ ಕಂಡುಬಂದಿದ್ದರಿಂದ ಶೇರುಪೇಟೆ ಚೇತರಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ. 
 
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.19 ರಷ್ಟು ಏರಿಕೆಯಾಗಿದೆ. ಜಪಾನ್‌ನ ನಿಕೈ ಶೇರುಪೇಟೆ ಶೇ0.58 ರಷ್ಟು ಚೇತರಿಕೆ ಕಂಡಿದೆ.
 

ವೆಬ್ದುನಿಯಾವನ್ನು ಓದಿ