ಸೆನ್ಸೆಕ್ಸ್:28 ಸಾವಿರ ಪಾಯಿಂಟ್‌ಗಳ ಗಡಿದಾಟಿದ ಸೂಚ್ಯಂಕ

ಗುರುವಾರ, 20 ನವೆಂಬರ್ 2014 (17:16 IST)
ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 35 ಪಾಯಿಂಟ್‌ಗಳ ಅಲ್ಪ ಚೇತರಿಕೆ ಕಂಡಿದೆ.
 
ಡಾಲರ್ ಎದುರಿಗೆ ರೂಪಾಯಿ ಮೌಲ್ಯ 62 ರೂಪಾಯಿಗಳಿಗೆ ತಲುಪಿದ್ದರೂ ಟಿಸಿಎಸ್, ಇನ್ಫೋಸಿಸ್, ಸಿಪ್ಲಾ ಮತ್ತು ಎಸ್‌ಬಿಐ ಶೇರುಗಳ ವಹಿವಾಟು ಚೇತರಿಕೆ ಕಂಡಿದ್ದರಿಂದ ಸೂಚ್ಯಂಕ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಕಳೆದ ಎರಡು ದಿನಗಳ ವಹಿವಾಟಿನಲ್ಲಿ 145 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ 34.71 ಪಾಯಿಂಟ್‌ಗಳ ಏರಿಕೆ ಕಂಡು 28,118.53 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 19.60 ಪಾಯಿಂಟ್‌ಗಳ ಕುಸಿತ ಕಂಡು 8353.15 ಅಂಕಗಳಿಗೆ ತಲುಪಿದೆ. 
 
ಎಸ್‌ಬಿಐ, ವಿಪ್ರೋ, ಟಾಟಾ ಪವರ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಹಿಂಡಾಲ್ಕೋ, ಐಟಿಸಿ, ಒಎನ್‌ಜಿಸಿ, ಆರ್‌ಐಎಲ್, ಎಚ್‌ಯುಎಲ್ ಮತ್ತು ಸಿಐಎಲ್ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
 

ವೆಬ್ದುನಿಯಾವನ್ನು ಓದಿ