ಜಾಗತಿಕ ಚೇತರಿಕೆಯ ವಹಿವಾಟಿನಿಂದ ಸೂಚ್ಯಂಕ ಏರಿಕೆ

ಗುರುವಾರ, 26 ನವೆಂಬರ್ 2015 (14:01 IST)
ಜಾಗತಿಕ ಮಾರುಕಟ್ಟೆಗಳ ಚೇತರಿಕೆಯ ವಹಿವಾಟಿನಿಂದಾಗಿ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 104 ಪಾಯಿಂಟ್‌ಗಳ ಏರಿಕೆ ಕಂಡಿದೆ. 
 
ಕಳೆದ ಎರಡು ದಿನಗಳ ವಹಿವಾಟಿನ ಮುಕ್ತಾಯಕ್ಕೆ 92.75 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 103.98 ಪಾಯಿಂಟ್‌ಗಳ ಏರಿಕೆ ಕಂಡು 25,879.72 ಅಂಕಗಳಿಗೆ ತಲುಪಿದೆ. 
 
ಗುರುನಾನಕ ಜಯಂತಿ ಹಿನ್ನೆಲೆಯಲ್ಲಿ ನಿನ್ನೆ ಶೇರುಪೇಟೆಗೆ ಸಾರ್ವಜನಿಕ ರಜೆ ಘೋಷಿಸಲಾಗಿತ್ತು.
 
ಗೃಹೋಪಕರಣ ವಸ್ತುಗಳು, ರಿಯಲ್ಟಿ, ಎಫ್‌ಎಂಸಿಜಿ, ಐಟಿ ಮತ್ತು ಉಕ್ಕು ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ, ಇಂದಿನ ಆರಂಭಿಕ ವಹಿವಾಟಿನಲ್ಲಿ 26.75 ಪಾಯಿಂಟ್‌ಗಳ ಕುಸಿತ ಕಂಡು 7,858.35 ಅಂಕಗಳಿಗೆ ತಲುಪಿದೆ.
  
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.92 ರಷ್ಟು ಏರಿಕೆ ಕಂಡಿದೆ. ಜಪಾನ್‌ನ ನಿಕೈ ಶೇರುಪೇಟೆ ಸೂಚ್ಯಂಕ ಶೇ.0.56 ರಷ್ಟು ಚೇತರಿಕೆ ಕಂಡಿದೆ. ಶಾಂಘೈ ಶೇರುಪೇಟೆ ಕೂಡಾ ಶೇ.0.11 ರಷ್ಟು ಏರಿಕೆ ಕಂಡಿದೆ.
 

ವೆಬ್ದುನಿಯಾವನ್ನು ಓದಿ