ಸೆನ್ಸೆಕ್ಸ್: 28 ಸಾವಿರ ಅಂಕಗಳ ಗಡಿದಾಟಿದ ಶೇರುಪೇಟೆ

ಮಂಗಳವಾರ, 31 ಮಾರ್ಚ್ 2015 (14:32 IST)
ಜಾಗತಿಕ ಮಾರುಕಟ್ಟೆಗಳ ಚೇತರಿಕೆಯ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 106 ಪಾಯಿಂಟ್‌ಗಳ ಭಾರಿ ಚೇತರಿಕೆ ಕಂಡಿದೆ.

ಉಕ್ಕು, ತೈಲ ಮತ್ತು ಅನಿಲ, ಗೃಹೋಪಕರಣ ವಸ್ತುಗಳು, ಐಟಿ ಮತ್ತು ಹೆಲ್ತ್‌ಕೇರ್ ಕ್ಷೇತ್ರದ ಶೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 35.60 ಪಾಯಿಂಟ್‌ಗಳ ಏರಿಕೆಯಾಗಿ 8527.90 ಅಂಕಗಳಿಗೆ ತಲುಪಿದೆ.

ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 106.25 ಪಾಯಿಂಟ್‌ಗಳ ಏರಿಕೆಯಾಗಿ 28,082.11 ಅಂಕಗಳಿಗೆ ತಲುಪಿದೆ.

ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.53 ರಷ್ಟು ಏರಿಕೆಯಾಗಿದ್ದು, ಜಪಾನ್‌ನ ನಿಕೈ ಶೇರುಪೇಟೆ ಸೂಚ್ಯಂಕ ಕೂಡಾ ಶೇ.0.65 ರಷ್ಟು ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ