ಸೆನ್ಸೆಕ್ಸ್: 100 ಪಾಯಿಂಟ್‌ಗಳ ಚೇತರಿಕೆ ಕಂಡ ಶೇರುಪೇಟೆ ಸೂಚ್ಯಂಕ

ಮಂಗಳವಾರ, 4 ಆಗಸ್ಟ್ 2015 (14:40 IST)
ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳ ಬದಲಾವಣೆ ನಿರಾಕರಿಸಿರುವ ಮಧ್ಯೆಯೂ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 100 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 100 ಪಾಯಿಂಟ್‌ಗಳ ಏರಿಕೆ ಕಂಡು 27,963 ಅಂಕಗಳಿಗೆ ತಲುಪಿದೆ.
 
ಕೇಂದ್ರ ಸರಕಾರದ ಒತ್ತಡದ ಮಧ್ಯೆಯೂ ರಿಸರ್ವ್ ಬ್ಯಾಂಕ್ ರೆಪೋ ದರಗಳಲ್ಲಿ ಇಳಿಕೆಗೊಳಿಸಿದಲ್ಲಿ ದರ ನಿಯಂತ್ರಣಕ್ಕೆ ಅನಕೂಲವಾಗುವುದು ಎನ್ನುವ ಅಂಶವನ್ನು ಆರ್‌ಬಿಐ ತಳ್ಳಿಹಾಕಿದೆ.
 
ತೈಲ ಮತ್ತು ಅನಿಲ ಕಂಪೆನಿಗಳು ವಹಿವಾಟಿನಲ್ಲಿ ಲಾಭದತ್ತ ಸಾಗಿವೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಹೀರೋ ಮೋಟಾರ್ ಕಾರ್ಪೋರೇಶನ್, ಕೋಲ್ ಇಂಡಿಯಾ ಮತ್ತು ಹಿಂಡಾಲ್ಕೋ, ಗೇಲ್  ಮತ್ತು ಒಎನ್‌ಜಿಸಿ ಕಂಪೆನಿಗಳ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಹೆಚ್ಚಳವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ. 
 

ವೆಬ್ದುನಿಯಾವನ್ನು ಓದಿ