ಸೆನ್ಸೆಕ್ಸ್: ಅಲ್ಪ ಚೇತರಿಕೆ ಕಂಡ ಸಂವೇದಿ ಸೂಚ್ಯಂಕ

ಗುರುವಾರ, 21 ಆಗಸ್ಟ್ 2014 (13:47 IST)
ಜಾಗತಿಕ ಮಾರುಕಟ್ಟೆಗಳ ಮಿಶ್ರ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 56 ಪಾಯಿಂಟ್‌ಗಳ ಅಲ್ಪ ಚೇತರಿಕೆ ಕಂಡಿದೆ. 
 
ಗೃಹೋಪಕರಣ ವಸ್ತುಗಳು, ಐಟಿ, ತೈಲ ಮತ್ತು ಅನಿಲ, ರಿಯಲ್ಟಿ ಹಾಗೂ ವಾಹನೋದ್ಯಮ ಕ್ಷೇತ್ರದ ಶೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದರಿಂದ ಬಿಎಸ್‌ಇ ಸೂಚ್ಯಂಕ 56 ಪಾಯಿಂಟ್‌ಗಳ ಏರಿಕೆಯಾಗಿ 26,370.50 ಅಂಕಗಳಿಗೆ ತಲುಪಿದೆ. 
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 14.55 ಪಾಯಿಂಟ್‌ಗಳ ಏರಿಕೆ ಕಂಡು 7889.85 ಅಂಕಗಳಿಗೆ ತಲುಪಿದೆ.
 
ಜಪಾನ್‌ನ ನಿಕೈ ಮಾರುಕಟ್ಟೆ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.0.50 ರಷ್ಟು ಏರಿಕೆಯಾಗಿದೆ. ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.28ರಷ್ಟು ಏರಿಕೆ ಕಂಡಿದೆ.
 
 
 

ವೆಬ್ದುನಿಯಾವನ್ನು ಓದಿ