ಸೆನ್ಸೆಕ್ಸ್: ಲಾಭದಾಯಕ ವಹಿವಾಟಿನಿಂದ ಶೇರುಸೂಚ್ಯಂಕ ಕುಸಿತ

ಶುಕ್ರವಾರ, 25 ಏಪ್ರಿಲ್ 2014 (13:29 IST)
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನ ಮಧ್ಯೆ ಹೂಡಿಕೆದಾರರು ಲಾಭದಾಯಕ ವಹಿವಾಟಿಗೆ ಆಸಕ್ತಿ 
 
ತೋರಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 35 ಪಾಯಿಂಟ್‌ಗಳ ಕುಸಿತ ಕಂಡಿದೆ.
 
ತೈಲ ಮತ್ತು ಅನಿಲ, ಎಫ್‌ಎಂಸಿಜಿ, ಬಂಡವಾಳ ವಸ್ತುಗಳು, ವಾಹನೋದ್ಯಮ ಮಕ್ಕು ಉಕ್ಕು ಕ್ಷೇತ್ರದ ಶೇರುಗಳು 
 
ವಹಿವಾಟಿನಲ್ಲಿ ಕುಸಿತ ಕಂಡಿವೆ.
 
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 118.17 ಪಾಯಿಂಟ್‌ಗಳ ಏರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ 
 
ವಹಿವಾಟಿನಲ್ಲಿ 35.58 ಪಾಯಿಂಟ್‌ಗಳ ಇಳಿಕೆ ಕಂಡು 22,840.96 ಅಂಕಗಳಿಗೆ ತಲುಪಿದೆ.
 
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 4.20 ಪಾಯಿಂಟ್‌ಗಳ 
 
ಏರಿಕೆ ಕಂಡು 6836.60 ಅಂಕಗಳಿಗೆ ತಲುಪಿದೆ. 
 
ನಿನ್ನೆ ಮುಂಬೈನಲ್ಲಿ ಲೋಕಸಭೆ ಚುನಾವಣೆಗೆ ಮತದಾನ ನಡೆದಿದ್ದರಿಂದ ಶೇರುಪೇಟೆಗೆ ರಜೆ ಘೋಷಿಸಲಾಗಿತ್ತು.
 
ಏಷ್ಯಾ ಮಾರುಕಟ್ಟೆಗಳಾದ ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.0.17 ರಷ್ಟು 
 
ಕುಸಿತ ಕಂಡಿದೆ. ಜಪಾನ್‌ನ ನಿಕೈ ಮಾರುಕಟ್ಟೆ ಸೂಚ್ಯಂಕ ಕೂಡಾ ಶೇ.0.24 ರಷ್ಟು ಇಳಿಕೆ ಕಂಡಿದೆ.

ವೆಬ್ದುನಿಯಾವನ್ನು ಓದಿ