ಸೆನ್ಸೆಕ್ಸ್: 21 ತಿಂಗಳ ಗರಿಷ್ಠ ಕುಸಿತ ಕಂಡ ಶೇರುಸೂಚ್ಯಂಕ

ಬುಧವಾರ, 10 ಫೆಬ್ರವರಿ 2016 (17:45 IST)
ಹೂಡಿಕೆದಾರರು ಬ್ಲ್ಯೂ-ಚಿಪ್ ಶೇರುಗಳ ಮಾರಾಟಕ್ಕೆ ಆಸಕ್ತಿ ತೋರಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 262.08 ಪಾಯಿಂಟ್‌ಗಳ ಇಳಿಕೆ ಕಂಡಿದೆ. 
 
ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 262.08 ಪಾಯಿಂಟ್‌ಗಳ ಇಳಿಕೆ ಕಂಡು 23,938.32 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 82.50 ಪಾಯಿಂಟ್‌ಗಳ ಕುಸಿತ ಕಂಡು 7,215.70 ಅಂಕಗಳಿಗೆ ತಲುಪಿದೆ.
 
ಟಾಟಾ ಮೋಟಾರ್ಸ್, ಆದಾನಿ ಪೋರ್ಟ್ಸ್, ಎಚ್‌ಡಿಎಫ್‌ಸಿ, ಸಿಪ್ಲಾ, ಬಿಎಚ್‌ಇಎಲ್, ಡಾ.ರೆಡ್ಡಿ, ಲುಪಿನ್, ಒಎನ್‌ಜಿಸಿ, ಎಕ್ಸಿಸ್ ಬ್ಯಾಂಕ್, ಹೀರೋ ಮೋಟಾರ್ ಕಾರ್ಪೋರೇಶನ್ ಮತ್ತು ಐಟಿಸಿ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.  
 
ಆದಾಗ್ಯೂ, ಕೋಲ್ ಇಂಡಿಯಾ, ಎಲ್‌ಆಂಡ್‌ಟಿ, ಮಾರುತಿ, ಆರ್‌ಐಎಲ್, ಎಂಆಂಡ್‌ಎಂ, ಇನ್ಫೋಸಿಸ್ ಮತ್ತು ಟಾಟಾ ಸ್ಟೀಲ್ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
 

ವೆಬ್ದುನಿಯಾವನ್ನು ಓದಿ