ಸೆನ್ಸೆಕ್ಸ್: 77 ಪಾಯಿಂಟ್‌ಗಳ ಕುಸಿತ ಕಂಡ ಸಂವೇದಿ ಸೂಚ್ಯಂಕ

ಮಂಗಳವಾರ, 25 ನವೆಂಬರ್ 2014 (13:43 IST)
ಸತತ ಮೂರು ದಿನಗಳ ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ಕಂಡಿದ್ದ ಶೇರುಪೇಟೆ ಸೂಚ್ಯಂಕ ಇಂದಿನ ವಹಿವಾಟಿನಲ್ಲಿ 77 ಪಾಯಿಂಟ್‌ಗಳ ಅಲ್ಪ ಕುಸಿತ ಕಂಡಿದೆ.
 
ಉಕ್ಕು, ವಿದ್ಯುತ್ ಮತ್ತು ರಿಯಲ್ಟಿ ಕ್ಷೇತ್ರದ ಶೇರುಗಳ ಮಾರಾಟಕ್ಕೆ ಹೂಡಿಕೆದಾರರು ಆಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಂಕ ಕುಸಿತಗೊಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ. 
 
ಕಳೆದ ಮೂರು ದಿನಗಳ ವಹಿವಾಟಿನಲ್ಲಿ 496.69 ಪಾಯಿಂಟ್‌ಗಳ ಚೇತರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 77 ಪಾಯಿಂಟ್‌ಗಳ ಕುಸಿತ ಕಂಡು 28,411.68 ಅಂಶಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 32.60 ಪಾಯಿಂಟ್‌ಗಳ ಕುಸಿತ ಕಂಡು 8497.55 ಅಂಕಗಳಿಗೆ ತಲುಪಿದೆ.
 
ಟಾಟಾ ಸ್ಟೀಲ್, ಹಿಂಡಾಲ್ಕೋ, ಟಾಟಾ ಪವರ್, ಲಾರ್ಸನ್, ಕೋಲ್ ಇಂಡಿಯಾ, ಎಸ್‌ಬಿಐಎನ್ ಮತ್ತು ಐಸಿಐಸಿಐ ಬ್ಯಾಂಕ್ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ. 
 

ವೆಬ್ದುನಿಯಾವನ್ನು ಓದಿ