ಸೆನ್ಸೆಕ್ಸ್: ಐತಿಹಾಸಿಕ ದಾಖಲೆ ಬರೆದ ಶೇರುಪೇಟೆ ಸೂಚ್ಯಂಕ

ಶುಕ್ರವಾರ, 31 ಜುಲೈ 2015 (19:11 IST)
ಕೇಂದ್ರ ಸರಕಾರ ಸರಕಾರಿ ಸಂಚಾಲಿತ ಸಂಸ್ಥೆಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡಲಾಗುವುದು ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಹೂಡಿಕೆದಾರರು ಸೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಸೂಚ್ಯಂಕ ಒಂದು ತಿಂಗಳ 409.21 ಗರಿಷ್ಟ ಏರಿಕೆ ಕಂಡಿದೆ.
 
ಮುಂದಿನ ವಾರದಿಂದ ಉದ್ಯೋಗಿಗಳ ಭವಿಷ್ಯ ನಿಧಿಯನ್ನು ಶೇರು ಮಾರುಕಟ್ಟೆಯಲ್ಲಿ ಹೂಡಲು ಸರಕಾರ ನಿರ್ಧರಿಸಿರುವುದು ಹೂಡಿಕೆದಾರರಿಗೆ ಹೊಸ ಗಳಿಕೆಯ ಅಸ್ತ್ರ ದೊರೆತಂತಾಗಿದೆ. 
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ 111.05 ಪಾಯಿಂಟ್‌ಗಳ ಏರಿಕೆ ಕಂಡು 8,532.85 ಅಂಕಗಳಿಗೆ ತಲುಪಿದೆ.
 
ಮುಂಬರುವ ಸೆಪ್ಟೆಂಬರ್ ವೇಳೆಗೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಲ್ಲಿ 20 ಸಾವಿರ ಕೋಟಿ ರೂ ನೆರವು ನೀಡುವುದಾಗಿ ಕೇಂದ್ರ ಸರಕಾರ ಘೋಷಿಸಿದೆ.
 
ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 409.21 ಪಾಯಿಂಟ್‌ಗಳ ಏರಿಕೆ ಕಂಡು 28,161.17 ಅಂಕಗಳಿಗೆ ತಲುಪಿದೆ. 
 

ವೆಬ್ದುನಿಯಾವನ್ನು ಓದಿ