ಸೆನ್ಸೆಕ್ಸ್: ಪಾತಾಳಕ್ಕೆ ಕುಸಿದ ಶೇರುಪೇಟೆಯ ಸಂವೇದಿ ಸೂಚ್ಯಂಕ

ಸೋಮವಾರ, 20 ಏಪ್ರಿಲ್ 2015 (16:58 IST)
ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ತೊಳಲಾಟದ ವಹಿವಾಟಿನಿಂದಾಗಿ 555.89 ಪಾಯಿಂಟ್‌ಗಳ ಕುಸಿತ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಕೇಂದ್ರ ಸರಕಾರದ ನೂತನ ಆರ್ಥಿಕ ತೆರಿಗೆ ನೀತಿಯಿಂದಾಗಿ ವಿದೇಶಿ ಬಂಡವಾಳ ಹೂಡಿಕೆದಾರರು ಙಾಗೂ ಭಾರತೀಯ ಮಾರುಕಟ್ಟೆಗೆ ತಿರುಗುಬಾಣವಾಗಬಹುದೇ ಎನ್ನುವ ಆತಂಕದಿಂದಾಗಿ ಹೂಡಿಕೆದಾರರು ಕಾದು ನೋಡುವ ತಂತ್ರ ಅನುಸರಿಸಿದ್ದರಿಂದ ಸೂಚ್ಯಂಕ ಪಾತಾಳಕ್ಕೆ ಕುಸಿದಿದೆ ಎಂದು ಡೀಲರ್‌ಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 157.9 ಪಾಯಿಂಟ್‌ಗಳ ಇಳಿಕೆ ಕಂಡು  8,448.1  ಅಂಕಗಳಿಗೆ ಕುಸಿತ ಕಂಡಿದೆ.

ಸಾಗರೋತ್ತರ ಹೂಡಿಕೆದಾರರು ಇಂದಿನ ಆರಂಭಿಕ ವಹಿವಾಟಿನಲ್ಲಿ 675 ಕೋಟಿ ರೂಪಾಯಿಗಳ ಶೇರುಗಳನ್ನು ಮಾರಾಟ ಮಾಡಿರುವುದು ದೇಶಿಯ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ.

ಎಚ್‌ಡಿಎಫ್‌ಸಿ, ಸಿಪ್ಲಾ ಮತ್ತು ಮಹೀಂದ್ರಾ ಆಂಡ್ ಮಹೀಂದ್ರಾ ರಿಲಯನ್ಸ್, ಹೀರೋ ಮೋಟೋಕಾರ್ಪೋ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿದ್ದು, ಐಸಿಐಸಿಐ ಬ್ಯಾಂಕ್ ಮತ್ತು ಸನ್‌ಫಾರ್ಮಾ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.

ವೆಬ್ದುನಿಯಾವನ್ನು ಓದಿ