ಸೆನ್ಸೆಕ್ಸ್: ಭಾರಿ ಚೇತರಿಕೆ ಕಂಡ ಸಂವೇದಿ ಸೂಚ್ಯಂಕ

ಸೋಮವಾರ, 19 ಮೇ 2014 (12:13 IST)
ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 154 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ರಿಯಲ್ಟಿ, ಬಂಡವಾಳ ವಸ್ತುಗಳು, ವಿದ್ಯುತ್, ತೈಲ, ಬ್ಯಾಂಕಿಂಗ್ ಮತ್ತು ಉಕ್ಕಿನ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಭಾರಿ ಚೇತರಿಕೆಯಾಗಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
 
ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 154.30 ಪಾಯಿಂಟ್‌ಗಳ ಏರಿಕೆ ಕಂಡು 24,238.29 ಅಂಕಗಳಿಗೆ ತಲುಪಿದೆ. 
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 38.25 ಪಾಯಿಂಟ್‌ಗಳ ಏರಿಕೆ ಕಂಡು 7241.25 ಅಂಕಗಳಿಗೆ ತಲುಪಿದೆ. 
 
ಕೋಲ್ ಇಂಡಿಯಾ, ಬಿಎಚ್‌ಇಎಲ್, ಟಾಟಾ ಪವರ್, ಒಎನ್‌ಜಿಸಿ, ಎಸ್‌ಬಿಐ, ಎಸ್‌ಎಸ್‌ಎಲ್‌ಟಿ ಮತ್ತು ಲಾರ್ಸನ್ ಕಂಪೆನಿಗಳ ಶೇರುಗಳು ವಹಿವಾಟಿನಲ್ಲಿ ಭಾರಿ ಚೇತರಿಕೆ ಕಂಡಿವೆ. 
 
 

ವೆಬ್ದುನಿಯಾವನ್ನು ಓದಿ