ಸೆನ್ಸೆಕ್ಸ್: 130 ಪಾಯಿಂಟ್‌ಗಳ ಕುಸಿತ ಕಂಡ ಶೇರು ಸೂಚ್ಯಂಕ

ಸೋಮವಾರ, 25 ಮೇ 2015 (17:20 IST)
ಕಾರ್ಪೋರೇಟ್ ಕಂಪೆನಿಗಳ ನಿರಾಶಾದಾಯಕ ತ್ರೈಮಾಸಿಕ ಫಲಿತಾಂಶ ಹಾಗೂ ಲಾಭದಯಾಕ ವಹಿವಾಟಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 130 ಪಾಯಿಂಟ್‌ಗಳ ಕುಸಿತ ಕಂಡಿದೆ.
 
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 148.15 ಪಾಯಿಂಟ್‌ಗಳ ಏರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಎಫ್‌ಎಂಸಿಜಿ, ಉಕ್ಕು, ಗೃಹೋಪಕರಣ ವಸ್ತುಗಳು, ವಾಹನೋದ್ಯಮ, ಬ್ಯಾಂಕಿಂಗ್ ಮತತ್ು ಬಂಡವಾಳ ಸರಕು ಸಾಗಾಣೆ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿದೆ.
 
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 40.25 ಪಾಯಿಂಟ್‌ಗಳ ಇಳಿಕೆ ಕಂಡು 8418.79 ಅಂಕಗಳಿಗೆ ತಲುಪಿದೆ.
 
ಜಪಾನ್‌ನ ನಿಕೈ ಮಾರುಕಟ್ಟೆ ಸೂಚ್ಯಂಕ ಶೇ.0.70 ಪಾಯಿಂಟ್‌ಗಳಷ್ಟು ಚೇತರಿಕೆ ಕಂಡಿದ್ದು, ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಮಾರುಕಟ್ಟೆಗೆ ಇಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ.
 

ವೆಬ್ದುನಿಯಾವನ್ನು ಓದಿ