ಜಿಡಿಪಿ ಡೇಟಾ: ಅಲ್ಪ ಚೇತರಿಕೆ ಕಂಡ ಶೇರುಸಂವೇದಿ ಸೂಚ್ಯಂಕ

ಸೋಮವಾರ, 30 ನವೆಂಬರ್ 2015 (14:02 IST)
ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 44 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ಸೆಪ್ಟೆಂಬರ್ ತಿಂಗಳ ಜಿಡಿಪಿ ಡೇಟಾ ತ್ರೈಮಾಸಿಕ ಫಲಿತಾಂಶ ಮುಂದಿರುವಂತೆಯೇ ಹೂಡಿಕೆದಾರರು ಶೇರುಗಳ ಖರೀದಿಗೆ ಮುಂದಾಗಿದ್ದಾರೆ.  
 
ಏಷ್ಯಾ ಮಾರುಕಟ್ಟೆಗಳ ದುರ್ಬಲ ವಹಿವಾಟು, ವಿದೇಶಿ ಬಂಡವಾಳ ಹೂಡಿಕೆ ಹೊರಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಹೂಡಿಕೆದಾರರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.  
 
ಕಳೆದ ಎರಡು ದಿನಗಳ ವಹಿವಾಟಿನ ಮುಕ್ತಾಯಕ್ಕೆ 352.46 ಪಾಯಿಂಟ್‌ಗಳ ಚೇತರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 44.57 ಪಾಯಿಂಟ್‌ಗಳ ಕುಸಿತ ಕಂಡು 26,172.72 ಅಂಕಗಳಿಗೆ ತಲುಪಿದೆ.
 
ವಾಹನೋದ್ಯಮ, ಬಂಡವಾಳ ವಸ್ತುಗಳು, ವಿದ್ಯುತ್, ಬ್ಯಾಂಕಿಂಗ್, ರಿಯಲ್ಟಿ ಮತ್ತು ಗೃಹೋಪಕರಣ ವಸ್ತುಗಳ ಕ್ಷೇತ್ರದ ಶೇರುಗಳು ಲಾಭದಾಯಕ ವಹಿವಾಟಿನತ್ತ ಸಾಗಿವೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ 13.90 ಪಾಯಿಂಟ್‌ಗಳಷ್ಟು ಏರಿಕೆ ಕಂಡು 7956.60 ಅಂಕಗಳಿಗೆ ತಲುಪಿದೆ.
 
ಡಿಪಿ ಡೇಟಾ ತ್ರೈಮಾಸಿಕ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ, ಜಿಎಸ್‌ಟಿ ಮಸೂಗೆ ಅಂಗೀಕಾರವಾಗುವ ಸಾಧ್ಯತೆಗಳಿಂದಾಗಿ ಹೂಡಿಕೆದಾರರು ಶೇರುಗಳ ಖರೀದಿಗೆ ಮುಂದಾಗಿದ್ದಾರೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಜಪಾನ್‌ನ ನಿಕೈ ಮಾರುಕಟ್ಟೆ ಸೂಚ್ಯಂಕ ಶೇ.0.79 ರಷ್ಟು ಕುಸಿತವಾಗಿದೆ. ಶಾಂಘೈ ಶೇರುಪೇಟೆ ಶೇ.1.19 ರಷ್ಟು ಇಳಿಕೆ ಕಂಡಿದ್ದರೆ ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಕೂಡಾ ಶೇ.0.31 ರಷ್ಟು ಕುಸಿತ ಕಂಡಿದೆ.

ವೆಬ್ದುನಿಯಾವನ್ನು ಓದಿ