ಸೆನ್ಸೆಕ್ಸ್: 74 ಪಾಯಿಂಟ್‌ಗಳ ಚೇತರಿಕೆ ಕಂಡ ಸಂವೇದಿ ಸೂಚ್ಯಂಕ

ಮಂಗಳವಾರ, 21 ಅಕ್ಟೋಬರ್ 2014 (14:08 IST)
ಶೇರುಪೇಟೆಯ ಸೂಚ್ಯಂಕ ಸತತ ಮೂರನೇ ದಿನವು ಚೇತರಿಕೆಯಾಗಿದ್ದು ಇಂದಿನ ಆರಂಭಿಕ ವಹಿವಾಟಿನಲ್ಲಿ 74 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ಕೇಂದ್ರ ಸರಕಾರ ಆರ್ಥಿಕ ನೀತಿಗಳಲ್ಲಿ ಸುಧಾರಣೆ ತರುವುದಾಗಿ ಘೋಷಿಸಿದ್ದರಿಂದ ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದಾರೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
 
ಕಳೆದ ಎರಡು ದಿನಗಳ ವಹಿವಾಟಿನ ಮುಕ್ತಾಯಕ್ಕೆ 430.51 ಪಾಯಿಂಟ್‌ಗಳ ಏರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 74.19 ಪಾಯಿಂಟ್‌ಗಳ ಏರಿಕೆಯಾಗಿ 26,504.04 ಅಂಕಗಳಿಗೆ ತಲುಪಿದೆ. 
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 21.80 ಪಾಯಿಂಟ್‌ಗಳ ಏರಿಕೆಯಾಗಿ 7901.20 ಅಂಕಗಳಿಗೆ ತಲುಪಿದೆ.
 
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.04 ರಷ್ಟು ಅಲ್ಪ ಚೇತರಿಕೆಯಾಗಿದೆ. ಆದರೆ, ಜಪಾನ್ ಶೇರುಪೇಟೆ ಶೇ.0.72 ರಷ್ಟು ಕುಸಿತ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
 
 
 

ವೆಬ್ದುನಿಯಾವನ್ನು ಓದಿ