ಆರ್ಥಿಕ ಸಮೀಕ್ಷೆಯ ಮಧ್ಯೆ ಭರ್ಜರಿ ಚೇತರಿಕೆ ಕಂಡ ಸೂಚ್ಯಂಕ

ಶುಕ್ರವಾರ, 27 ಫೆಬ್ರವರಿ 2015 (15:10 IST)
ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 180 ಪಾಯಿಂಟ್‌ಗಳ ಚೇತರಿಕೆ ಕಂಡಿದೆ.
 
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 261,34 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 180.91 ಪಾಯಿಂಟ್‌ಗಳ ಏರಿಕೆ ಕಂಡು 28,927.56 ಅಂಕಗಳಿಗೆ ತಲುಪಿದೆ.
 
ಬಂಡವಾಳ ವಸ್ತುಗಳು, ಉಕ್ಕು, ಹೆಲ್ತ್‌ಕೇರ್, ವಾಹನೋದ್ಯಮ, ಬ್ಯಾಂಕಿಂಗ್, ಗೃಹೋಪಕರಣ ವಸ್ತುಗಳು ಮತ್ತು ವಿದ್ಯುತ್ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಭರ್ಜರಿ ಚೇತರಿಕೆ ಕಂಡಿವೆ.
 
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 57.15 ಪಾಯಿಂಟ್‌ಗಳ ಏರಿಕೆ ಕಂಡು 8741.00 ಅಂಕಗಳಿಗೆ ತಲುಪಿದೆ.
 
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ,0.62 ಪಾಯಿಂಟ್‌ಗಳ ಏರಿಕೆ ಕಂಡಿದೆ. ಜಪಾನ್‌ನ ನಿಕೈ ಮಾರುಕಟ್ಟೆ ಸೂಚ್ಯಂಕ ಕೂಡಾ ಶೇ.0.15 ರಷ್ಟು ಚೇತರಿಕೆ ಕಂಡಿದೆ.
 
 
 
 
 

ವೆಬ್ದುನಿಯಾವನ್ನು ಓದಿ