ಡೀಸೆಲ್ ದರ ನಿಯಂತ್ರಣ ಮುಕ್ತ: ಭಾರಿ ಚೇತರಿಕೆ ಕಂಡ ಶೇರುಪೇಟೆ

ಸೋಮವಾರ, 20 ಅಕ್ಟೋಬರ್ 2014 (15:49 IST)
ಡೀಸೆಲ್ ದರವನ್ನು ನಿಯಂತ್ರಣಮುಕ್ತಗೊಳಿಸುವ ಕೇಂದ್ರ ಸರಕಾರದ ಆಶ್ವಾಸನೆಯಿಂದಾಗಿ ಹೂಡಿಕೆದಾರರು ಸೇರುಗಳ ಖರೀದಿಗೆ ಮುಂದಾಗಿದ್ದರಿಂದ ಸೂಚ್ಯಂಕ 400 ಪಾಯಿಂಟ್‌ಗಳ ಭರ್ಜರಿ ಏರಿಕೆ ಕಂಡಿದೆ.
 
ಮಹಾರಾಷ್ಟ್ರ ಮತ್ತು ಹರಿಯಾಣಾ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರವಾಗಿರುವ ಫಲಿತಾಂಶ ಕೂಡಾ ಶೇರುಪೇಟೆ ಚೇತರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
 
ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 377 ಪಾಯಿಂಟ್‌ಗಳ ಏರಿಕೆ ಕಂಡು 26,486 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳಾದ ಎಚ್‌ಪಿಸಿಎಲ್, ಬಿಪಿಸಿಎಲ್, ಒಎನ್‌ಜಿಸಿ, ರಿಲಯನ್ಸ್ ಕಂಪೆನಿಗಳು ಇಂದಿನ ವಹಿವಾಟಿನಲ್ಲಿ ಭಾರಿ ಏರಿಕೆ ಕಂಡಿವೆ.
 
ಹಿಂಡಾಲ್ಕೋ, ಟಾಟಾ ಮೋಟಾರ್ಸ್ ಚೇತರಿಕೆ ಕಂಡಿದ್ದರೆ ಇನ್ಫೋಸಿಸ್ ಮಕ್ಕು ವಿಪ್ರೋ ಕಂಪೆನಿಗಳ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.
 
 
 

ವೆಬ್ದುನಿಯಾವನ್ನು ಓದಿ