ಸೆನ್ಸೆಕ್ಸ್: 28 ಸಾವಿರ ಅಂಶಗಳ ಗಡಿ ದಾಟಿದ ಶೇರುಸೂಚ್ಯಂಕ

ಬುಧವಾರ, 1 ಜುಲೈ 2015 (14:42 IST)
ಹೂಡಿಕೆದಾರರು ಬಂಡವಾಳ ವಸ್ತುಗಳು ಮತ್ತು ಹೆಲ್ತ್‌ಕೇರ್ ಕ್ಷೇತ್ರದ ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 28 ಸಾವಿರ ಗಡಿಯನ್ನು ದಾಟಿದೆ.
 
ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 180.04 ಪಾಯಿಂಟ್‌ಗಳ ಏರಿಕೆ ಕಂಡು 28,007.42 ಅಂಕಗಳಿಗೆ ತಲುಪಿದೆ. 
 
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 61.25 ಪಾಯಿಂಟ್‌ಗಳ ಏರಿಕೆ ಕಂಡು 8,429.75 ಅಂಕಗಳಿಗೆ ತಲುಪಿದೆ.
 
ಗೇಲ್, ಎಲ್‌ಆಂಡ್‌ಟಿ, ಸಿಪ್ಲಾ, ಭಾರ್ತಿ ಏರ್‌ಟೆಲ್ ಮತ್ತು ಕೋಲ್ ಇಂಡಿಯಾ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
 
ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ಸಿಂಗಾಪೂರ್ ಮತ್ತು ತೈವಾನ್ ಶೇರುಪೇಟೆಗಳು ಶೇ.0.95 ರಷ್ಟು ಏರಿಕೆ ಕಂಡಿವೆ. ಆದರೆ, ಚೀನಾ ಶೇರುಪೇಟೆ ಶೇ.0.31 ರಷ್ಟು ಕುಸಿತ ಕಂಡಿದೆ.
 

ವೆಬ್ದುನಿಯಾವನ್ನು ಓದಿ