ಸೆನ್ಸೆಕ್ಸ್: ಪಾತಾಳಕ್ಕೆ ಕುಸಿತ ಶೇರುಪೇಟೆ ಸಂವೇದಿ ಸೂಚ್ಯಂಕ

ಬುಧವಾರ, 6 ಮೇ 2015 (16:33 IST)
ಹೂಡಿಕೆದಾರರು ಶೇರುಗಳ ಮಾರಾಟಕ್ಕೆ ಹೆಚ್ಚಿನ ಆಸಕ್ತಿ ತೋರಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 620 ಪಾಯಿಂಟ್‌ಗಳ ದಾಖಲೆಯ ಕುಸಿತ ಕಂಡಿದೆ.

ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 626 ಪಾಯಿಂಟ್‌ಗಳ ಕುಸಿತ ಕಂಡು 26,816 ಅಂಕಗಳಿಗೆ ಕುಸಿತ ಕಂಡಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 199 ಪಾಯಿಂಟ್‌ಗಳ ಕುಸಿತ ಕಂಡು 8124 ಅಂಕಗಳಿಗೆ ತಲುಪಿದೆ.

ಕೇಂದ್ರ ಸರಕಾರದ ವಿದೇಶಿ ಹೂಡಿಕೆದಾರರ ಮೇಲಿನ ಇತ್ತೀಚಿನ ತೆರಿಗೆ ವಿವಾದ ಹಾಗು ತೆರಿಗ ಸುಧಾರಣೆ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರದಿರುವುದು ಹೂಡಿಕೆದಾರರಿಂದ ಶೇರುಗಳ ಮಾರಾಟಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ಕಚ್ಚಾ ತೈಲ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿದ್ದರೆ ಬಿಎಚ್‌ಇಎಲ್, ಎನ್‌ಟಿಪಿಸಿ ಮತ್ತು ವೇದಾಂತ ಕಂಪೆನಿಗಳ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ