ಮಹಾಪರ್ವ ನನ್ನ ಕೊನೆಯ ಧಾರವಾಹಿ: ಸೀತಾರಾಂ

ಗುರುವಾರ, 4 ಜುಲೈ 2013 (14:17 IST)
PR
ನಾನು ಯಾವ ಧಾರವಾಹಿ ಮಾಡಿದರೂ ಅದು ಪ್ರಸ್ತುತಕ್ಕೆ ಹೊಂದಿಕೊಂಡಿರುತ್ತದೆ ಎಂಬುದು ನಿಜ. ಆದರೆ ಮಹಾಪರ್ವಕ್ಕೂ ಪ್ರಸ್ತುತ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ ಟಿ.ಎನ್. ಸೀತಾರಾಂ.

ಅವರ ಹೊಸ ಧಾರವಾಹಿ ಮಹಾಪರ್ವ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಇಲ್ಲೂ ಕೋರ್ಟ್ ಕಥೆ ಇರಲಿದೆ ಎನ್ನುವ ನಿರ್ದೇಶಕರು ಸದ್ಯ ಕನ್ನಡದಲ್ಲಿ ಯಾರೂ ಕೋರ್ಟ್ ಬೀಟ್ ನೋಡಿಕೊಳ್ಳುತ್ತಿಲ್ಲ. ಅದಕ್ಕಾಗಿ ನಾನು ಈ ದಾರಿ ಹಿಡಿದಿದ್ದೇನೆ. ಹೇಗಿದ್ದರೂ ನನಗೆ ಕೋರ್ಟ್ ಡೈರೆಕ್ಟರ್ ಎಂಬ ಹೆಸರು ಬಂದಾಗಿದೆ, ಇನ್ನೇನು ತೊಂದರೆಯಿಲ್ಲ ಎಂದು ನಸುನಗುತ್ತಾರೆ.

ಕನ್ನಡದ ಪ್ರೇಕ್ಷಕರಿಗೆ ಕೋರ್ಟ್‌ ಸಂಬಂಧಿ ಮಾಹಿತಿ ನೀಡುವ ಸದುದ್ದೇಶವೂ ಅವರಿಗಿದೆಯಂತೆ.
ಪ್ರಸ್ತುತ ಜಾಗತಿಕ ವಾತಾವರಣದ ವಸ್ತು ಮಹಾಪರ್ವದ್ದು. ಮ ಅಕ್ಷರದ ಮೋಹಿ ನಾನು ಎಂದುಕೊಳ್ಳಬೇಡಿ. ಈ ಧಾರವಾಹಿಗೆ ನಾನು ಕುರುಡು ಕಾಂಚಾಣ ಎಂದು ಹೆಸರಿಟ್ಟಿದ್ದೆ. ಅದನ್ನು ಮಹಾಪರ್ವ ಎಂದು ಬದಲಾಯಿಸಿ ಎಂದಿದ್ದು ಚಾನೆಲ್‌ನವರೇ. ನಾನು ಲಾಯರ್ ಆಗಿದ್ದಾಗ ಕಕ್ಷಿದಾರರ ಬಳಿ ದುಡ್ಡು ಕೇಳುವುದಕ್ಕೆ ಸಂಕೋಚ ಆಗುತ್ತಿತ್ತು. ಪಾಪ ಅವರ ಹತ್ತಿರ ಇರುತ್ತೋ ಇಲ್ವೋ ಎಂದೆನಿಸಿ ಬೇಡ ಬೇಡ ಕೊಡ್ಬೇಡಿ ಎನ್ನುತ್ತಿದ್ದೆ. ಅದೇ ಬಳಿಕ ಸಂಕಷ್ಟಕ್ಕೆ ಕಾರಣ ಆಯಿತು ಎನ್ನುತ್ತಾರೆ.

ಧಾರವಾಹಿಯ ಕುರಿತಾದ ಸಂವಾದ ಜಾಹಿರಾತಿಗಿಂತ ಉತ್ತಮ ಪ್ರಕಾರ ಪ್ರಚಾರ ತಂತ್ರ ಎನ್ನುವ ಸೀತಾರಾಂ ಈ ಧಾರವಾಹಿಯ ಕುರಿತಾಗಿ ಸಂವಾದ ಮಾಡಲಿದ್ದಾರಂತೆ.

ನನ್ನ ಎಲ್ಲಾ ಧಾರವಾಹಿಗಳಲ್ಲಿ ಪ್ರಭಾವಿ ಸ್ತ್ರೀ ಪಾತ್ರ ಇರುತ್ತದೆಯೇ ಹೊರತು ಆಕೆಯ ಕೇಂದ್ರಿತ ಧಾರವಾಹಿಯಲ್ಲ ಎಂದು ಸ್ಪಷ್ಟನೆ ನೀಡುತ್ತಾರೆ. ಇದೇ ನನ್ನ ಕೊನೆಯ ಧಾರವಾಹಿ ಎನ್ನುವ ಸೀತಾರಾಂ ಮುಂದೆ ಅಗ್ನಿ ಶ್ರೀಧರ್ ಬರೆದುಕೊಟ್ಟ ಕಥೆಯನ್ನು ಚಿತ್ರ ಮಾಡಲಿದ್ದಾರಂತೆ.

ವೆಬ್ದುನಿಯಾವನ್ನು ಓದಿ