ಬಿಗ್ ಬಾಸ್ ನಿಂದ ಹೊರಬಿದ್ದ ಪ್ರಿಯಾಂಕ ಅಲಿಯಾಸ್ ಚಂದ್ರಿಕಾ ಬಗ್ಗೆ ಸನ್ನಿಧಿ ಹೇಳಿದ್ದೇನು ಗೊತ್ತಾ?
ಸೋಮವಾರ, 27 ಜನವರಿ 2020 (09:30 IST)
ಬೆಂಗಳೂರು: ಈ ವಾರ ಬಿಗ್ ಬಾಸ್ ಮನೆಯಿಂದ ಪ್ರಿಯಾಂಕಾ ಎಲಿಮಿನೇಟ್ ಆಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರತಿಕ್ರಿಯೆ ಬರುತ್ತಿದೆ.
‘ಅಗ್ನಿಸಾಕ್ಷಿ’ ಧಾರವಾಹಿಯಲ್ಲಿ ಚಂದ್ರಿಕಾ ಪಾತ್ರದ ಮೂಲಕ ಹೆಸರು ಮಾಡಿದ್ದ ಪ್ರಿಯಾಂಕ ಹೊರಬಂದಿರುವುದಕ್ಕೆ ಅದೇ ಧಾರವಾಹಿಯಲ್ಲಿ ನಾಯಕಿ ಸನ್ನಿಧಿ ಪಾತ್ರ ಮಾಡುತ್ತಿದ್ದ ವೈಷ್ಣವಿ ಗೌಡ ಪ್ರತಿಕ್ರಿಯಿಸಿದ್ದಾರೆ. ಈ ಮೊದಲಿನಿಂದಲೂ ಪ್ರಿಯಾಂಕ ಬಿಗ್ ಬಾಸ್ ಮನೆಯಲ್ಲಿ ಪ್ರಾಮಾಣಿಕವಾಗಿಯೇ ಇದ್ದಾರೆ ಎನ್ನುತ್ತಿದ್ದ ವೈಷ್ಣವಿ ಈಗ ಹೊರಬಂದಿರುವ ಪ್ರಿಯಾಂಕಗೆ ಅಭಿನಂದನೆ ಸಲ್ಲಿಸಿದ್ದಾರೆ. 105 ದಿನಗಳನ್ನು ಕಳೆದಿದ್ದಕ್ಕೆ ಚಪ್ಪಾಳೆಯ ಮೂಲಕ ಅಭಿನಂದನೆ ಸಲ್ಲಿಸಿರುವ ವೈಷ್ಣವಿ ಚೆನ್ನಾಗಿ ಆಡಿದ್ದೀಯಾ ಎಂದು ಬೆನ್ನುತಟ್ಟಿದ್ದಾರೆ.
ಇನ್ನು, ಪ್ರಿಯಾಂಕಾ ಹೊರ ಬಂದಿರುವುದಕ್ಕೆ ಕೆಲವರು ಒಳ್ಳೆಯ ನಿರ್ಧಾರ, ಹೇಗಿದ್ದರೂ ಟಾಸ್ಕ್ ವಿಚಾರದಲ್ಲಿ ಅವರು ಸೊನ್ನೆಯಾಗಿದ್ದರು ಎಂದರೆ ಮತ್ತೆ ಕೆಲವರು ಪ್ರಿಯಾಂಕ ತಮ್ಮ ಹಾಸ್ಯದ ಮೂಲಕ ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಮನರಂಜನೆ ಕೊಡುತ್ತಿದ್ದರು. ಅವರಿಲ್ಲದ ಮೇಲೆ ಶೋ ನೋಡಲು ಬೇಸರವಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಏನೇ ಆದರೂ ಕೊನೆಯ ಹಂತದಲ್ಲಿ ಎಲಿಮಿನೇಟ್ ಆಗಿರುವುದು ಪ್ರಿಯಾಂಕಗೂ ಬೇಸರ ತಂದಿದೆ.