ಬಿಗ್ ಬಾಸ್ ಕನ್ನಡ ಸ್ಪರ್ಧಿ ಚೈತ್ರಾ ಕೋಟೂರು ವಿವಾದಿತ ಹೇಳಿಕೆ ವಿರುದ್ಧ ಪ್ರತಿಭಟನೆ

ಶುಕ್ರವಾರ, 8 ನವೆಂಬರ್ 2019 (10:41 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸ್ಪರ್ಧಿ ಚೈತ್ರಾ ಕೋಟೂರು ನೀಡಿರುವ ಹೇಳಿಕೆಯೊಂದರ ವಿರುದ್ಧ ಇದೀಗ ದಲಿತ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ.


ಹರೀಶ್ ರಾಜ್ ಜತೆಗೆ ಮಾತನಾಡುವಾಗ ಚೈತ್ರಾ ನನ್ನನ್ನು ಯಾರೂ ಮಾತನಾಡಿಸಲ್ಲ. ನಾವೇನು ಅಸ್ಪೃಶ್ಯರಾ? ಎಂದು ಕೇಳಿದ್ದರು. ಇದು ದಲಿತ ವರ್ಗದವರಿಗೆ ಮಾಡಿದ ಅವಮಾನವಾಗಿದೆ ಎಂಬುದು ದಲಿತ ಸಂಘಟನೆಗಳ ಆರೋಪ.

ಹೀಗಾಗಿ ನಿನ್ನೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿರುವ ಕೆಲವು ದಲಿತ ಸಂಘಟನೆಗಳು, ಹೇಳಿಕೆ ಬಗ್ಗೆ ಚೈತ್ರಾ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ, ಇಂದು ಬಿಗ್ ಬಾಸ್ ಮನೆಯೆದುರೂ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ