ಬಿಗ್ ಬಾಸ್ ನಿಂದ ಚೈತ್ರಾ ಔಟ್

ಭಾನುವಾರ, 30 ಅಕ್ಟೋಬರ್ 2016 (07:41 IST)
ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಮನೆಯಿಂದ ಕಳೆದ ವಾರ ನಾಮಿನೇಟ್ ಆಗಿದ್ದ ಏಳು ಸ್ಪರ್ಧಿಗಳ ಪೈಕಿ ಗಾಯಕಿ ಚೈತ್ರಾ  ಹೊರ ಬಿದ್ದಿದ್ದಾರೆ.

ಕಳೆದ ವಾರ ಸಂಜನಾ, ಪ್ರಥಮ್, ಮಾಳವಿಕಾ, ಮೋಹನ್, ಓಂ ಪ್ರಕಾಶ್ ರಾವ್, ಚೈತ್ರಾ ಮತ್ತು ಕೀರ್ತಿ ಕುಮಾರ್  ಮನೆಯಿಂದ ಹೊರ ಹೋಗಲು ನಾಮಾಂಕಿತರಾಗಿದ್ದರು. ಇವರಲ್ಲಿ ಕಡಿಮೆ ಅಂಕ ಬಂದ ಚೈತ್ರಾ ಮನೆಯಿಂದ ಔಟ್ ಆಗಿದ್ದಾರೆ.

ವಾರದ ಕತೆ ಕಿಚ್ಚನ ಜತೆ ಸಂವಾದದಲ್ಲಿ ನಟ ಸುದೀಪ್ ಬಿಗ್ ಬಾಸ್ ಮೇಲೆ ಅನುಮಾನ ವ್ಯಕ್ತಪಡಿಸುವ ಸ್ಪರ್ಧಿಗಳಿಗೆ ಸಣ್ಣದಾಗಿ ಕುಟುಕಿದರು. ಬಿಗ್ ಬಾಸ್ ಗೆ ಹೆಚ್ಚು ಗೌರವ ನೀಡುತ್ತಿಲ್ಲ ಎಂದು ಸ್ಪರ್ಧಿಗಳನ್ನು ಪ್ರಶ್ನಿಸಿದರು.

ಪ್ರಥಮ್ ನಿಂದ ಏಟು ತಿಂದ ಶಾಲಿನಿ ಅಗತ್ಯಕ್ಕಿಂತ ಹೆಚ್ಚು ಅದನ್ನು ದೊಡ್ಡದು ಮಾಡಿದ್ದರು ಎಂದು ಆರೋಪಗಳೂ ಬಂದಿತ್ತು. ಇದು ಪ್ರಥಮ್ ಗೆ ಲಾಭವಾಗಿಯೂ ಪರಿಣಮಿಸಿತು. ಹೀಗಾಗಿ ಅವರು ಉಳಿದುಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ