ಅಭಿಮಾನಿಗಳು ನಿರೀಕ್ಷಿಸುತ್ತಿದ್ದ ಗುಡ್ ನ್ಯೂಸ್ ಕೊಟ್ಟ ಚಂದನ್-ಕವಿತಾ ಜೋಡಿ

ಸೋಮವಾರ, 14 ಸೆಪ್ಟಂಬರ್ 2020 (11:37 IST)
ಬೆಂಗಳೂರು: ಕನ್ನಡ ಕಿರುತೆರೆಯ ಮೋಸ್ಟ್ ಫೇವರಿಟ್ ಜೋಡಿ ಎಂದೇ ಕರೆಯಲ್ಪಡುವ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಕಳೆದ ಕೆಲವು ದಿನಗಳಿಂದ ಗಾಸಿಪ್ ಗೆ ಆಹಾರವಾಗುತ್ತಿದ್ದರು.


ಚಂದನ್ ಜತೆಗಿರುವ ಕವಿತಾ ಫೋಟೋ ಪದೇ ಪದೇ ನೋಡಿ ನೆಟ್ಟಿಗರು ನೀವು ಮದುವೆಯಾಗುತ್ತೀರಾ ಎಂದು ಕೇಳುತ್ತಲೇ ಇದ್ದರು. ಇದಕ್ಕೆ ಚಂದನ್ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎನ್ನುತ್ತಲೇ ಇದ್ದರು. ಮೊನ್ನೆ ಚಂದನ್ ಬರ್ತ್ ಡೇ ಆಚರಿಸಿಕೊಳ್ಳಲು ಕವಿತಾ ಹೈದರಾಬಾದ್ ಗೆ ತೆರಳಿದ ಫೋಟೋ ನೋಡಿದ ಮೇಲಂತೂ ಅಭಿಮಾನಿಗಳ ಪ್ರಶ್ನೆ ಹೆಚ್ಚಾಗಿದೆ.

ಇದಕ್ಕೀಗ ಚಂದನ್ ಉತ್ತರ ಕೊಟ್ಟಿದ್ದಾರೆ. ತಾವಿಬ್ಬರೂ ಜತೆಗೇ ಮಾಡಿಸಿಕೊಂಡಿರುವ ಫೋಟೋ ಶೂಟ್ ನ ಫೋಟೋವೊಂದನ್ನು ಪ್ರಕಟಿಸಿರುವ ಚಂದನ್ ಸದ್ಯದಲ್ಲೇ ಜತೆಗೇ ಸೀರಿಯಲ್ ಮಾಡುವ ಸುಳಿವು ಕೊಟ್ಟಿದ್ದಾರೆ. ಇದನ್ನು ಅಭಿಮಾನಿಗಳೂ ಸಂತಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ