ಇಂದಿನಿಂದ ಜೀ ಕನ್ನಡದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ

ಶನಿವಾರ, 20 ಜುಲೈ 2019 (09:44 IST)
ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಮುಕ್ತಾಯವಾದ ಬೆನ್ನಲ್ಲೇ ಜೀ ಕನ್ನಡ ಮತ್ತೊಂದು ರಿಯಾಲಿಟಿ ಶೋ ಆರಂಭಿಸಿದ್ದು, ಜನಪ್ರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ ಶೋ ಇಂದಿನಿಂದ ಆರಂಭವಾಗಲಿದೆ.


ಇಂದಿನಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9.30 ಗಂಟೆಗೆ ಡ್ಯಾನ್ಸ್ ಶೋ ಪ್ರಸಾರವಾಗಲಿದೆ. ತೀರ್ಪುಗಾರರಾಗಿ ಅರ್ಜುನ್ ಜನ್ಯಾ, ವಿಜಯ್ ರಾಘವೇಂದ್ರ ಮತ್ತು ರಕ್ಷಿತಾ ಪ್ರೇಮ್ ಭಾಗವಹಿಸಲಿದ್ದಾರೆ. ಅನುಶ್ರೀ ನಿರೂಪಕಿಯಾಗಿರುತ್ತಾರೆ.

ಈ ಮೊದಲು ಸೀರಿಯಲ್ ತಾರೆಯನ್ನು ಒಳಗೊಂಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಜನಪ್ರಿಯವಾಗಿತ್ತು. ಈಗ ಅದೇ ಮಾದರಿಯಲ್ಲಿ ಈ ಬಾರಿಯೂ ಸೆಲೆಬ್ರಿಟಿಗಳನ್ನು ಹಾಕಿಕೊಂಡು ಶೋ ಮಾಡಲಾಗುತ್ತಿದೆ ಎನ್ನಲಾಗಿದೆ. ಆದರೆ ಯಾರೆಲ್ಲಾ ಸ್ಪರ್ಧಿಗಳು ಎನ್ನುವ ರಹಸ್ಯವನ್ನು ಇನ್ನೂ ವಾಹಿನಿ ಬಿಟ್ಟುಕೊಟ್ಟಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ