ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋನಲ್ಲಿ ಬ್ರಾಹ್ಮಣ ಸಮುದಾಯವರಿಗೆ ಅವಹೇಳನ ಮಾಡುವಂತಹ ದೃಶ್ಯ ತೋರಿಸಲಾಗಿತ್ತುಎಂದು ಆರೋಪಿಸಲಾಗಿತ್ತು.
ಈ ಹಿನ್ನಲೆಯಲ್ಲಿ ಪೇಜಾವರ ಶ್ರೀ ಸೇರಿದಂತೆ ಬ್ರಾಹ್ಮಣ ಸಮುದಾಯವೇ ಸಿಡಿದು ನಿಂತಿತ್ತು. ಕ್ಷಮೆ ಕೇಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಹೀಗಾಗಿ ನಿರೂಪಕ ಆನಂದ್ ಮತ್ತು ತೀರ್ಪುಗಾರರ ಪರವಾಗಿ ಸಿತಾರಾಂ ಬೇಷರತ್ ಕ್ಷಮೆ ಯಾಚಿಸಿದ್ದಾರೆ.