ಬಿಗ್ ಬಾಸ್ ಗಾಗಿ ನಾಲ್ಕು ಪ್ರಮುಖ ಧಾರವಾಹಿಗಳು ಅಂತ್ಯ
ಬಿಗ್ ಬಾಸ್ ಕನ್ನಡ ಸೀಸನ್ 9 ಟಿವಿಯಲ್ಲಿ ಪ್ರಸಾರವಾಗಲಿದೆ. ಹೀಗಾಗಿ ಕಲರ್ಸ್ ವಾಹಿನಿ ತನ್ನ ಜನಪ್ರಿಯ ಧಾರವಾಹಿಗಳಾದ ನಮ್ಮನೆ ಯುವರಾಣಿ, ಕನ್ಯಾಕುಮಾರಿ, ಮಂಗಳಗೌರಿ ಮದುವೆ ಮತ್ತು ನನ್ನರಸಿ ರಾಧೆ ಎಂಬ ಮೂರು ಧಾರವಾಹಿಗಳನ್ನು ಅಂತ್ಯಗೊಳಿಸುತ್ತಿದೆ.
ಈ ಪೈಕಿ ನಮ್ಮನೆ ಯುವರಾಣಿ ಮತ್ತು ಮಂಗಳ ಗೌರಿ ಮದುವೆ ಈಗಾಗಲೇ 1000 ಸಂಚಿಕೆಗಳನ್ನು ದಾಟಿ ಎಷ್ಟೋ ದಿನಗಳಾಗಿವೆ. ನನ್ನರಸೆ ರಾಧೆ 650 ಪ್ಲಸ್ ಸಂಚಿಕೆಗಳನ್ನು ಕಂಡಿದೆ. ಇನ್ನು ಕನ್ಯಾಕುಮಾರಿ ಇನ್ನೂ 300 ಪ್ಲಸ್ ಸಂಚಿಕೆ ಪ್ರಸಾರವಾಗಿದೆಯಷ್ಟೇ. ಬಿಗ್ ಬಾಸ್ ಗಾಗಿ ಮೂರು ಕಡಿಮೆ ಟಿಆರ್ ಪಿ ಬರುವ ಧಾರವಾಹಿಗಳನ್ನು ಕಲರ್ಸ್ ವಾಹಿನಿ ಸ್ಥಗಿತಗೊಳಿಸುತ್ತಿದೆ.