ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಟಾಕೀಸ್ ಮೂಲಕ ಒಳ್ಳೆಯ ಹೆಸರು ಗಳಿಸಿರುವ ಸೃಜನ್ ಲೋಕೇಶ್ ಗೆ ಈಗ ಅಭಿಮಾನಿಗಳ ಸಂಘ ಹುಟ್ಟಿಕೊಂಡಿದೆ.
ನಿನ್ನೆ ಅವರ ಜನುಮ ದಿನದಂದು ಈ ಸಂಘ ಲೋಕಾರ್ಪಣೆಗೊಂಡಿದೆ. ಮಜಾ ಟಾಕೀಸ್ ಎನ್ನುವ ಕಾಮಿಡಿ ಶೋ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸೃಜನ್ ಗೆ ಸ್ಟಾರ್ ನಟರ ಹಾಗೆ ಅಭಿಮಾನಿಗಳ ಬಳಗವೇ ಹುಟ್ಟಿಕೊಂಡಿದೆ.
ಇಂತಹದ್ದೊಂದು ಬೇಡಿಕೆಯನ್ನು ಅವರ ಅಭಿಮಾನಿಗಳು ಮೊದಲಿನಿಂದಲೂ ಆಗ್ರಹಿಸುತ್ತಿದ್ದರಂತೆ. ಆದರೆ ಸ್ವತಃ ಸೃಜನ್ ಇದಕ್ಕೆ ಒಪ್ಪಿಗೆ ಕೊಟ್ಟಿರಲಿಲ್ಲವಂತೆ. ಆದರೆ ಇದೀಗ ಅಭಿಮಾನಿ ಸಂಘದ ಹೆಸರಿನಲ್ಲಿ ಸಮಾಜ ಸೇವೆ ಮಾಡಬಹುದು ಎಂದು ಒಪ್ಪಿಕೊಂಡಿದ್ದಾರಂತೆ ಸೃಜಾ.
ನಿನ್ನೆ ಅವರ ಬರ್ತ್ ಡೇ ಸಮಾರಂಭದ ಜತೆಗೆ ಅಭಿಮಾನಿ ಸಂಘದ ಉದ್ಘಾಟನೆ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಸಸಿ ವಿತರಣೆ, ವಿದ್ಯಾರ್ಥಿಗಳ ಕಂಪ್ಯೂಟರ್ ವಿತರಣೆ ಕಾರ್ಯಕ್ರಮವೂ ನಡೆಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ