ಬಿಗ್ ಬಾಸ್ ಕನ್ನಡ 8: ಈ ವಾರ ಎಲಿಮಿನೇಟ್ ಆದ ಸ್ಪರ್ಧಿ ಇವರೇ!
ವಾರದ ಕತೆ ಕಿಚ್ಚನ ಜೊತೆ ಶೋನಲ್ಲಿ ಕಿಚ್ಚ ಸುದೀಪ್ ಇಂದು ಅಧಿಕೃತವಾಗಿ ಮನೆಯಿಂದ ಹೊರಹೋಗುತ್ತಿರುವ ಅಭ್ಯರ್ಥಿಯನ್ನು ಘೋಷಿಸಲಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನಿಧಿ ಮನೆಯಿಂದ ಹೊರಹೋಗುತ್ತಿರುವುದಾಗಿ ಸುದ್ದಿ ಹರಡಿದೆ. ಟಾಸ್ಕ್ ವಿಚಾರಗಳಲ್ಲಿ ಅಷ್ಟೇನೋ ಮಾಡದ ನಿಧಿಗೆ ವೀಕ್ಷಕರ ವೋಟ್ ಕಡಿಮೆ ಬಿದ್ದಿದೆ ಎನ್ನಲಾಗಿದೆ.