ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಿಚ್ಚ ಸುದೀಪ್ ನಿರ್ಮಾಣದ ವಾರಸ್ದಾರ ಧಾರವಾಹಿಯಿಂದ ನಟಿ ಯಜ್ಞಾ ಶೆಟ್ಟಿ ಹೊರ ಬಂದಿದ್ದಾರೆ.
ಲಿಂಗ ತಾರತಮ್ಯದ ಕತೆಯಿರುವ ಧಾರವಾಹಿಯಲ್ಲಿ ಒಂದು ಮಗುವಿನ ಅಮ್ಮನ ಪಾತ್ರ ನಿರ್ವಹಿಸುತ್ತಿದ್ದರು. ಮಗುವಿನ ಪಾತ್ರದಲ್ಲಿ ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋ ವಿನ್ನರ್ ಚಿತ್ರಾಲಿ ನಟಿಸುತ್ತಿದ್ದರು.
ಆದರೆ ಇದೀಗ ಧಾರವಾಹಿ ಕತೆ ಕೊಂಚ ಮುಂದಕ್ಕೆ ಭಡ್ತಿ ಪಡೆಯುತ್ತಿದ್ದು, ಯಜ್ಞಾ ಶೆಟ್ಟಿ ದೊಡ್ಡ ಮಗಳ ಅಮ್ಮನ ಪಾತ್ರ ನಿರ್ವಹಿಸಬೇಕಾಗುತ್ತದೆ. ಇದು ತಮ್ಮ ಮುಂದಿನ ಸಿನಿಮಾಗಳಿಗೆ ತೊಂದರೆಯಾಗಬಹುದು ಎಂದು ಯಜ್ಞಾ ಆ ಧಾರವಾಹಿಯಿಂದ ಹೊರಬರಲು ನಿರ್ಧರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ