ಆತಂಕವಾದದ ನರ್ಸರಿಯಾಗಿ ಬದಲಾಗಿದೆ ದೇವರನಾಡು ಕೇರಳ: ನರೇಂದ್ರ ಮೋದಿ

ಬುಧವಾರ, 9 ಏಪ್ರಿಲ್ 2014 (12:55 IST)
ರಾಜ್ಯದ ಕಾಂಗ್ರೆಸ್ ಸರಕಾರ ಅಭಿವೃದ್ಧಿಯ ಕಾರ್ಯಸೂಚಿಯಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ "ಪ್ರವಾಸೋದ್ಯಮ ಭೂಮಿ" ಎಂದು ಹೆಸರುಗಳಿಸಿದ್ದ ಕೇರಳ ಈಗ "ಭಯೋತ್ಪಾದನೆಯ ನರ್ಸರಿ" ಯಾಗಿ ಮಾರ್ಪಟ್ಟಿದೆ ಎಂದು ಟೀಕಿಸಿದ್ದಾರೆ.
PTI

ರಾಜ್ಯದಲ್ಲಿನ ಲೋಕಸಭಾ ಚುನಾವಣಾ ಪ್ರಚಾರದ ಕೊನೆಯ ದಿನವಾದ ಇಂದು ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು "ಕೇರಳವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಬಹುದು. ಆದರೆ ಈ ಭೂಮಿಯೀಗ ಭಯೋತ್ಪಾದನೆಯ ನರ್ಸರಿಯಾಗಿ ರೂಪಾಂತರಗೊಂಡಿದೆ" ಎಂದು ಹೇಳಿದ್ದಾರೆ.

"ಕೇರಳ ಪ್ರವಾಸೋದ್ಯಮ ಆಯುರ್ವೇದ ಸೇರಿದಂತೆ ಇತರ ಸಂಪನ್ಮೂಲಗಳ ಆಗರವಾಗಿದೆ. ಆದರೆ ಆಯುರ್ವೇದ, ವೈದ್ಯಕೀಯ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ತಾನು ಹೊಂದಿರುವ ಸಾಮರ್ಥ್ಯದ ಲಾಭ ಗಳಿಸಲು ವಿಫಲವಾಗಿದೆ".

"ತಮ್ಮ ಸಂಪನ್ಮೂಲಗಳನ್ನು ಉಪಯೋಗಿಸಿಕೊಳ್ಳುವ ಅವಕಾಶವನ್ನು ರಾಜ್ಯ ಸರ್ಕಾರ ನಾಶ ಮಾಡಿರುವುದರಿಂದ ಉದ್ಯೋಗದ ಹುಡುಕಾಟದಲ್ಲಿ ಯುವಜನತೆ ರಾಜ್ಯವನ್ನು ಬಿಟ್ಟು ಹೋಗುವ ಅನಿವಾರ್ಯತೆ ಎದುರಾಗಿದೆ".

"ದೇವರನಾಡು ಕೇರಳದಲ್ಲಿ ಉದ್ಯೋಗಗಳು ಸಿಗುತ್ತಿಲ್ಲ. ಹಾಗಾಗಿ ಯುವಕರು ಪರದೇಶಗಳಿಗೆ ಹೋಗುತ್ತಿದ್ದಾರೆ. ಆನಿವಾಸಿಗಳ ಹಣದ ಕಾರಣಕ್ಕೆ ರಾಜ್ಯ ಹಸಿರಾಗಿದೆ" ಎಂದು ಮೋದಿ ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ