ಉಪಪ್ರಧಾನಿ ರೇಸ್‌ನಲ್ಲಿ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್

ಶುಕ್ರವಾರ, 28 ಮಾರ್ಚ್ 2014 (13:25 IST)
PTI
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆಯೋ ಇಲ್ಲವೋ ಆದರೆ, ಪಕ್ಷದ ಮುಖಂಡರಲ್ಲಿ ಉಪಪ್ರಧಾನಿ ಸೇರಿದಂತೆ ಹಲವಾರು ಹುದ್ದೆಗಳಿಗೆ ಭಾರಿ ಪೈಪೋಟಿ ಆರಂಭವಾಗಿದೆ.

ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ತಾವು ಕೂಡಾ ಉಪಪ್ರದಾನಿ ಆಕಾಂಕ್ಷಿ ಎಂದು ಹಲವಾರು ಬಾರಿ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ. ಇದೀಗ ಸುಷ್ಮಾ ಸ್ವರಾಜ್ ಕೂಡಾ ಉಪಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ ಎಂದು ಬಿಜೆಪಿ ಅನಾಮಧೇಯ ಮೂಲಗಳು ತಿಳಿಸಿವೆ.

ಬಿಜೆಪಿಯೇನಾದರೂ ಅಧಿಕಾರಕ್ಕೆ ಬಂದರೆ ಪ್ರಧಾನಿ ಯಾರಾಗುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ, ಉಪಪ್ರಧಾನಿ ಹುದ್ದೆಗೆ ಸಂಬಂಧಿಸಿ ತಿಕ್ಕಾಟ ನಡೆಯುವ ಸೂಚನೆಗಳು ಈಗಲೇ ಸಿಗಲಾರಂಭಿಸಿವೆ.

ಇತ್ತೀಚೆಗಷ್ಟೇ ಬಿಜೆಪಿ ಮಿತ್ರ ಪಕ್ಷವಾದ ಅಕಾಲಿದಳ ಅರುಣ್ ಜೇಟ್ಲಿ ಉಪಪ್ರಧಾನಿಯಾಗಲಿದ್ದಾರೆ ಎಂದಿತ್ತು. ಈಗ ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾಸ್ವರಾಜ್ ಉಪಪ್ರಧಾನಿಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಮಧ್ಯಪ್ರದೇಶದ ಸಚಿವ ಸುರೇಂದ್ರ ಪತ್ವಾ. ಪತ್ವಾ ಅವರು ಸುಷ್ಮಾ ಉಪಸ್ಥಿತಿಯಲ್ಲೇ ಈ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ