"ಚುನಾವಣೆ ಮುಗಿಯಲಿ, ಯಾರು ತುಂಡು ತುಂಡಾಗಿ ಕತ್ತರಿಸುತ್ತಾರೆ" ನೋಡೋಣ ಎಂದ ರಾಜೇ ಬಂಧನಕ್ಕೆ ಕಾಂಗ್ರೆಸ್ ಆಗ್ರಹ

ಮಂಗಳವಾರ, 8 ಏಪ್ರಿಲ್ 2014 (17:51 IST)
ಭಾನುವಾರ ಚುನಾವಣಾ ಆಯೋಗದ ಮುಂದೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾದ ನರೇಂದ್ರ ಮೋದಿ ಅವರ ಆಪ್ತ ಅಮಿತ್ ಶಾ ಬಂಧನದ ಬೇಡಿಕೆಯನ್ನಿಟ್ಟಿದ್ದ ಕಾಂಗ್ರೆಸ್ ಇಂದು, ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇಯವರನ್ನು ಬಂಧಿಸುವಂತೆ ಆಗ್ರಹಿಸಿದೆ.
PTI

ವರದಿಗಳ ಪ್ರಕಾರ, ಚುನಾವಣಾ ಪ್ರಚಾರದ ಸಮಯದಲ್ಲಿ ರಾಜೇ "ಬಹಿರಂಗ ಬೆದರಿಕೆ" ಯನ್ನೊಡ್ಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಅವರನ್ನು ಬಂಧಿಸುವಂತೆ ಆಯೋಗಕ್ಕೆ ಮನವಿ ಮಾಡಿದೆ.

ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ರಾಜೇ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯ ಚುನಾವಣಾ ಅಧಿಕಾರಿ ವಿ. ಎಸ್. ಸಂಪತ್ ಅವರಿಗೆ ಕಾಂಗ್ರೆಸ್ ಪತ್ರವನ್ನು ರವಾನಿಸಿದೆ.

ಜೈಪುರದಲ್ಲಿ, ಆಮ್ ಆದ್ಮಿ ಪಕ್ಷ ಕೂಡ ರಾಜೇ "ಪ್ರಚೋದನಕಾರಿ" ಭಾಷಣ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಯೋಗಕ್ಕೆ ಒತ್ತಾಯಿಸಿದೆ.

“ಚುನಾವಣೆ ಮುಗಿಯಲಿ, ಯಾರು ಯಾರನ್ನು ತುಂಡು ತುಂಡಾಗಿ ಕತ್ತರಿಸುತ್ತಾರೆ ಎಂದು ನಾವು ನೋಡೋಣ" ಎಂದು ರಾಜೇ ಹೇಳಿದ್ದಾರೆ ಎಂದು ಕಾಂಗ್ರೆಸ್ಸಿನ ಕಾನೂನು ವಿಭಾಗದ ಕಾರ್ಯದರ್ಶಿ ಕೆ.ಸಿ.ಮಿತ್ತಲ್ ಆಯೋಗದ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಹರಾಣಾಪುರದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್, ಮೋದಿಯನ್ನು ತುಂಡುಗಳಾಗಿ ಕೊಚ್ಚಿ ಹಾಕಬೇಕು ಎಂದು ಬೆದರಿಕೆ ಹಾಕಿದ್ದಕ್ಕೆ ಪ್ರತಿಕ್ರಿಯೆಯಾಗಿ ರಾಜೇ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ವೆಬ್ದುನಿಯಾವನ್ನು ಓದಿ