ನಾನು ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸುತ್ತಿಲ್ಲ :ಶಾಝಿಯಾ ಇಲ್ಮಿ

ಶುಕ್ರವಾರ, 14 ಮಾರ್ಚ್ 2014 (16:59 IST)
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತ ಪಡಿಸಿದ್ದ ಆಮ್ ಆದ್ಮಿ ಪಕ್ಷದ ನಾಯಕಿ ಶಾಝಿಯಾ ಇಲ್ಮಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ನಾನು ಕಾಂಗ್ರೆಸ್ ಅಧ್ಯಕ್ಷೆಯ ವಿರುದ್ಧ ಸ್ಪರ್ಧಿಸುತ್ತಿಲ್ಲ ಎಂದು ಶಾಝಿಯಾ ಇಲ್ಮಿ ಹೇಳಿದ್ದಾರೆ.

ರಾಯ್ ಬರೇಲಿಯಿಂದ ನಾನು ಚುನಾವಣೆಯನ್ನು ಎದುರಿಸುತ್ತಿಲ್ಲ. ಈ ವಿಷಯದಲ್ಲಿ ನಾನು ಒಪ್ಪಿಗೆಯನ್ನು ಸೂಚಿಸಿರಲಿಲ್ಲ. ಕಳೆದ 2 ತಿಂಗಳಿಂದ ನಾನು ಇದಕ್ಕೆ ಅಸಮ್ಮತಿ ಸೂಚಿಸುತ್ತಿದ್ದೆ. ಎಂದು ಆಪ್ ನಾಯಕಿ ಟ್ವಿಟ್ ಮಾಡಿದ್ದಾರೆ.

ಶಾಝಿಯಾ ಇಲ್ಮಿ ರಾಯ್ ಬರೇಲಿ ಕ್ಷೇತ್ರದಿಂದ ಆಖಾಡಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಇತ್ತೀಚಿಗೆ ಹರಿದಾಡುತ್ತಿತ್ತು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಆರ್ ಕೆ ಪುರಮ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಬಹಳ ಕಡಿಮೆ ಅಂತರದಿಂದ ಸೋಲನ್ನು ಕಂಡಿದ್ದರು.

ವೆಬ್ದುನಿಯಾವನ್ನು ಓದಿ