ಪೆಂಟಗನ್ ವಸ್ತ್ರಸಂಹಿತೆ ಕುರಿತು ಸಿಖ್ ಮುಖಂಡರ ನಿರಾಶೆ

ಮಂಗಳವಾರ, 1 ಏಪ್ರಿಲ್ 2014 (11:47 IST)
ವಾಷಿಂಗ್ಟನ್: ನೂತನ ಪೆಂಟಗನ್ ವಸ್ತ್ರ ಸಂಹಿತೆ ಅಗತ್ಯಗಳ ಬಗ್ಗೆ ಅಮೆರಿಕದ ಸಿಖ್ ಮುಖಂಡರು ನಿರಾಶೆ ವ್ಯಕ್ತಪಡಿಸಿದ್ದಾರೆ.ಮಿಲಿಟರಿಯಲ್ಲಿ ಪೇಟಗಳು, ಉತ್ತರೀಯಗಳು ಮತ್ತು ಗಡ್ಡವನ್ನು ಬಿಡುವ ಬಗ್ಗೆ ಸಡಿಲ ನಿರ್ಬಂಧಗಳಿರಬೇಕೆಂದು ಸಿಖ್ಖರು ಬಯಸಿದ್ದು, ಇದಕ್ಕಾಗಿ ರಕ್ಷಣಾ ಕಾರ್ಯದರ್ಶಿ ಚಕ್ ಹೇಗಲ್ ಅವರಿಗೆ ಪತ್ರಬರೆಯುವುದಕ್ಕಾಗಿ ಕಾಂಗ್ರೆಸ್ ಸದಸ್ಯರ ಸಹಿಸಂಗ್ರಹದಲ್ಲಿ ಅವರು ತೊಡಗಿದ್ದಾರೆ. ಈ ಪತ್ರದಲ್ಲಿ ಸೇನೆಯ ಸಿಖ್ಖರ ವಸ್ತ್ರಸಂಹಿತೆ ನಿಯಮಗಳನ್ನು ನವೀಕರಿಸಿ ದೇಶಭಕ್ತ ಸಿಖ್ ಅಮೆರಿಕನ್ನರು ತಮ್ಮ ಧಾರ್ಮಿಕ ಕಟ್ಟಳೆಗಳಿಗೆ ಬದ್ಧವಾಗಿದ್ದು, ಪ್ರೀತಿಸುವ ದೇಶಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿದ್ದಾರೆ.

ಸಿಖ್ ಸೈನಿಕರು ಪೇಟಗಳನ್ನು ಧರಿಸಿ, ಗಡ್ಡಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಸಿಖ್ ನಂಬಿಕೆಗಳ ಅನುಸಾರ ಬಿಡುವುದಕ್ಕೆ ಅವಕಾಶ ನೀಡಬೇಕೆಂದು ಕೋರಲಾಗಿದೆ.

ವೆಬ್ದುನಿಯಾವನ್ನು ಓದಿ