ನವೆಂಬರ್‌ನಿಂದ ಎಲ್‌ಪಿಜಿ ಸಬ್ಸಿಡಿ ಪಡೆಯಲು ಆಧಾರ ಕಾರ್ಡ್ ಕಡ್ಡಾಯ

ಬುಧವಾರ, 5 ಅಕ್ಟೋಬರ್ 2016 (14:25 IST)
ಮುಂಬರುವ ನವೆಂಬರ್ ತಿಂಗಳಿನಿಂದ ಎಲ್‌ಪಿಜಿ ಸಬ್ಸಿಡಿ ಪಡೆಯಲು ಆಧಾರ ಕಾರ್ಡ್ ಕಡ್ಡಾಯಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
 
ಕೇಂದ್ರ ಸರಕಾರ ಪ್ರಸ್ತುತ ಕುಟುಂಬವೊಂದಕ್ಕೆ ಪ್ರತಿ ವರ್ಷಕ್ಕೆ 12 ಸಿಲಿಂಡರ್‌‌ಗಳನ್ನು ಸಬ್ಸಿಡಿ ದರದಲ್ಲಿ ನೀಡುತ್ತಿದೆ. ಸಬ್ಸಿಡಿ ಮೊತ್ತವನ್ನು ಸರಕಾರ ನೇರವಾಗಿ ಫಲಾನುಭಿ ಖಾತೆಗೆ ಜಮಾ ಮಾಡುತ್ತದೆ. 
 
ನವೆಂಬರ್ ತಿಂಗಳಿನಿಂದ ಎಲ್‌ಪಿಜಿ ಸಬ್ಸಿಡಿ ಪಡೆಯಬೇಕಾದವರು ಆಧಾರ ಕಾರ್ಡ್ ಕಡ್ಡಾಯವಾಗಿ ನೀಡಲೇಬೇಕಾಗುತ್ತದೆ. ಇಲ್ಲವಾದಲ್ಲಿ ಗ್ರಾಹಕರು ಎಲ್‌ಪಿಜಿ ಸಿಲಿಂಡರ್‌ನ್ನು ಮಾರುಕಟ್ಟೆ ದರದಲ್ಲಿ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.
 
ಆಧಾರ ಕಾರ್ಡ್ ದೊರೆಯುವವರೆಗೆ ಗ್ರಾಹಕರು ವೋಡರ್ ಐಡಿ, ರೇಶನ್ ಕಾರ್ಡ್ ಮತ್ತು ಕಿಸಾನ್ ಫೋಟೋ ಪಾಸ್ ಬುಕ್ ಅಥವಾ ಪಾಸ್‌ಪೋರ್ಟ್ ದಾಖಲೆಗಳನ್ನು ಗ್ಯಾಸ್ ಏಜೆನ್ಸಿಗೆ ನೀಡಬಹುದಾಗಿದೆ.
 
ಆಸ್ಸಾಂ , ಮೇಘಾಲಯ ಮತ್ತು ಜಮ್ಮು ಕಾಶ್ಮಿರ ಹೊರತುಪಡಿಸಿ ದೇಶದ ಇತರ ರಾಜ್ಯಗಳಲ್ಲಿ ನವೆಂಬರ್‌ನಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ